ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಆಗಿದ್ದ ಚಂದ್ರಕಾಂತ ಪ್ರಭು ಫೆ.28ರಂದು ವಯೋನಿವೃತ್ತಿ ಹೊಂದಿದ್ದು, ಅವರನ್ನು ಸಂಘದ ವತಿಯಿಂದ ಮಾ. ೦8ರಂದು ಅಭಿನಂದಿಸಲಾಯಿತು.
ಸಂಘದ ವಠಾರದಲ್ಲಿ ಜರಗಿದ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಕಾಶ ನಾರಾಯಣ ರಾವ್ ಮಾತನಾಡಿ ನಾನಾ ಹುದ್ದೆಗಳನ್ನು ನಿರ್ವಹಿಸಿರುವ ಇವರು ಸಂಘದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಸಂಘದ ಎಲ್ಲಾ ಹುದ್ದೆಗಳನ್ನು ನಿರ್ವಹಿಸಿ ಸಿಇಒ ಆಗಿ ನಿವೃತ್ತಿ ಹೊಂದುತ್ತಿರುವುದು ಇವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಸಂಘದ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಪಾತ್ರ ಮಹತ್ತರವಾದುದು. ಸೇವೆಯ ಜತೆ ಪ್ರಾಮಾಣಿಕ ಕೆಲಸ ಕಾರ್ಯ ಮಾಡುವ ಸಿಬ್ಬಂದಿಗಳು ಉನ್ನತ ಸ್ಥಾನಗಳಿಸುತ್ತಾರೆ ಎಂದರು.
ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವ ರಾವ್, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನೆರಿಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಸಂಘದ ನಿರ್ದೇಶಕ ಕಜೆ ವೆಂಕಟೇಶ್ವರ ಭಟ್,ಸಹಕಾರಿ ಧುರೀಣ ನಾರಾಯಣ ಫಡಕೆ, ಆಡೂರು ವೆಂಕಟ್ರಾಯ ಶುಭ ಹಾರೈಸಿದರು.
ಉಪಾಧ್ಯಕ್ಷ ರಾಘವ ಗೌಡ ಕುಡುಮಡ್ಕ, ನಿರ್ದೇಶಕರಾದ ಅಶ್ವಿನಿ ಹೆಬ್ಬಾರ್, ಮೋಹಿನಿ, ಸುಮಾ ಗೋಖಲೆ, ಶಶಿಧರ ಕಲ್ಮಂಜ, ಚೆನ್ನಕೇಶವ, ಅಜಯ್ ಕಲ್ಲಿಕಾಟ್, ಶಿವಪ್ರಸಾದ್ ಗೌಡ,ರಾಘವ ಕಲ್ಮಂಜ ಉಪಸ್ಥಿತರಿದ್ದರು.
ಸಿಇಒ ಪ್ರಸನ್ನ ಪರಾಂಜಪೆ ಕಾರ್ಯಕ್ರಮ ನಿರೂಪಿಸಿದರು. ಕಕ್ಕಿಂಜೆಯ ಶಾಖಾ ಪ್ರಬಂಧಕಿ ಪುಷ್ಪಾವತಿ ಸ್ವಾಗತಿಸಿದರು. ನೆರಿಯ ಶಾಖಾ ಪ್ರಬಂಧಕ ಸದಾನಂದ ವಂದಿಸಿದರು.