ಉಜಿರೆ:ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಅಂತಿಮ ವರ್ಷದ ವಿದ್ಯಾರ್ಥಿ ಮಹಮ್ಮದ್ ಹಾಫಿಲ್ ಎಲ್ಲಾ ರಂಗಗಳಲ್ಲಿ ತನ್ನ ಅದ್ವಿತೀಯ ಸಾಧನೆಗಾಗಿ, ಕಾಲೇಜಿನ ಎಲ್ಲಾ ವಿಭಾಗಗಳಲ್ಲೂ ಬೆಸ್ಟ್ ಅವ್ಟ್ ಗೋಯಿಂಗ್ ಸ್ಟೂಡೆಂಟ್ ಆಗಿ ಹೊರ ಹೊಮ್ಮಿದ್ದಾರೆ.
ಕಲಿಕೆಯಲ್ಲಿ, ಕ್ರೀಡಾವಿಭಾಗ ಹಾಗೂ ಸಾಂಸ್ಕೃತಿಕ ವಿಭಾಗ ಹೀಗೆ ಎಲ್ಲ ರಂಗಗಳಲ್ಲೂ ಮಿಂಚಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿ ಅಲ್ಲೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಉಜಿರೆಯ ಉದ್ಯಮಿ ರೊ. ಅಬೂಬಕರ್ ಮತ್ತು ರೇಶ್ಮಾ ದಂಪತಿಯ ಪುತ್ರ.