ಉಜಿರೆ: ರೈತ ಉತ್ಪಾದಕರ ಕಂಪನಿಯಲ್ಲಿ ಮಾ. 7ರಂದು ಕಂಪನಿಯ ಆಡಳಿತ ಮಂಡಳಿಯ ಸಭೆಯಲ್ಲಿ ನೋಂದಾಯಿತ ರೈತರಿಗೆ ರಿಯಾಯಿತಿ ದರದಲ್ಲಿ ಅಡಿಕೆ ಸುಲಿಯುವ ಯಂತ್ರ ಹಾಗೂ ಮದ್ದು ಸಿಂಪಡಿಸುವ ಯಂತ್ರ ಬಿಡುಗಡೆ ಮಾಡಿ ರೈತರಿಗೆ ವಿತರಿಸಲಾಯಿತು.

ಸಂದರ್ಭದಲ್ಲಿ ಕಂಪನಿಯ ಅಧ್ಯಕ್ಷ ಜಿ. ಗಣೇಶ್ ಭಟ್, ಯೋಜನಾ ಸಂಯೋಜಕ ಡಿಕೇಸ್ ಧರ್ಮೇಂದ್ರ ಬೆಂಗಳೂರು, ಕಂಪನಿಯ ನಿರ್ದೇಶಕ ಸೀತಾರಾಮ ಶೆಟ್ಟಿ ಕೆಂಬರ್ಜೆ, ಚಂದ್ರಶೇಖರ್ ಗೌಡ ನಿಡ್ಲೆ, ಶಿವಾನಂದ ಮಯ್ಯ ಅರಸಿನಮಕ್ಕಿ, ಜಿ. ಡಿ.ಪುಷ್ಪ ಗರ್ದಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಕೂರ್ನಿ, ಸಿಬ್ಬಂದಿ ಹರ್ಷಿತಾ ಹಾಗೂ ರೈತರು ಉಪಸ್ಥರಿದ್ದರು.
