ಮಲ್‌ಜ‌ಅ ರಂಝಾನ್ ಪ್ರಾರ್ಥನಾ ಸಮ್ಮೇಳನ, ಸಮಾಲೋಚನಾ ಸಭೆ – ರಾಜ್ಯ ಮಟ್ಟದ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ನಿರ್ಧಾರ: ಸ್ವಾಗತ ಸಮಿತಿ ರಚನೆ

0

ಬೆಳ್ತಂಗಡಿ: ಕಳೆದ 16 ವರ್ಷಗಳಿಂದ ಉಜಿರೆ ಕಾಶಿಬೆಟ್ಟುವಿನಲ್ಲಿ ಸಯ್ಯಿದ್ ಉಜಿರೆ ತಂಙಳ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್‌ಜ‌ಅ ಎಜುಕೇಶನ್, ದ‌ಅವಾ ಏಂಡ್ ರಿಲೀಫ್ ಟ್ರಸ್ಟ್ ಇದರ ವತಿಯಿಂದ ಈ ಬಾರಿ ರಂಝಾನ್ 27 ರ “ಸಂಭವನೀಯ ಲೈಲತುಲ್ ಕದರ್” ಪುಣ್ಯ ರಾತ್ರಿಯಂದು ಬೃಹತ್ ಮಟ್ಟದ ಪ್ರಾರ್ಥನಾ ಸಮ್ಮೇಳನ ನಡೆಸುವರೇ ಗಣ್ಯರ ಸಮಾಲೋಚನಾ ಸಭೆಯು ಮಲ್‌ಜ‌ಅ ಇಂಗ್ಲೀಷ್ ಮೀಡಿಯಂ ಕ್ಯಾಂಪಸ್ ನಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಶಿಲ್ಪಿ ಸಯ್ಯಿದ್ ಅಲವಿ ಜಲಾಲುದ್ದೀನ್ ಉಜಿರೆ ತಂಙಳ್ ಮಾರ್ಗದರ್ಶನ ಹಾಗೂ ಯೋಜನೆಯ ವಿವರ ನೀಡಿದರು. ವೇದಿಕೆಯಲ್ಲಿದ್ದ ಪ್ರಾರ್ಥನಾ ಸಮ್ಮೇಳನದ ಪೂರ್ವಾಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಗುರುವಾಯನಕೆರೆ, ಹಮೀದ್ ಸ‌ಅದಿ ಕಳೆಂಜಿಬೈಲು, ಬಟ್ಲಡ್ಕ ಗ್ರಾ. ಪಂ. ಮಾಜಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ, ಮಲ್‌ಜ‌ಅ ಪ್ರಧಾನ ಧರ್ಮಗುರು ಸಯ್ಯಿದ್ ಫಹೀಮ್ ತಂಙಳ್ ಮಂಜೇಶ್ವರ, ಖಾಲಿದ್ ಮುಸ್ಲಿಯಾರ್ ಕುಂಟಿನಿ, ಎ. ಅಹ್ಮದ್ ಬಶೀರ್ ಪಂಜಿಮೊಗರು, ಮೊದಲಾದವರು ಸಂದರ್ಭೋಚಿತವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿಂದೆ ಮೂರು ಬಾರಿ ಪ್ರಾರ್ಥನಾ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು ಈ‌ಬಾರಿ ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು.‌ ಸಮಾಲೀಚನಾ ಸಭೆಯಲ್ಲಿ ಎಸ್.ಎಸ್.ಎಫ್., ಎಸ್‌.ವೈ.ಎಸ್., ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಮೆನೇಜ್ ಮೆಂಟ್ ಅಸೋಸಿಯೇಷನ್, ಎಸ್.ಜೆ.ಯು, ಸಂಯುಕ್ತ ಜಮಾಅತ್ ಸಹಿತ ಸುನ್ನೀ‌ ಸಂಘ ಕುಟುಂಬದ ಪದಾಧಿಕಾರಿಗಳು, ವಿವಿಧ ಜಮಾಅತ್ ಪ್ರತಿನಿಧಿಗಳು ಭಾಗವಹಿಸಿದ್ದರು.

ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಸ್ಚಾಗತಿಸಿ ಪ್ರಸ್ತಾವನೆ ಮಂಡಿಸಿದರು. ಸಂಸ್ಥೆಯ ಪಿಆರ್‌ಒ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಉಳ್ಳಾಳ ಉರೂಸ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಪ್ರಾರ್ಥನಾ ಸಂಗಮದ ಸ್ವಾಗತ ಸಮಿತಿ‌ರಚಿಸಲಾಗಿ ಚೇರ್ಮೆನ್ ಆಗಿ ಹಾಜಿ ಹೈನಾರ್ ಶಾಫಿ ಗುರುವಾಯನಕೆರೆ, ಜನರಲ್ ಕನ್ವೀನರ್ ಆಗಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಫೈನಾನ್ಸ್ ಸೆಕ್ರೆಟರಿ ಯಾಗಿ ಶಂಶುದ್ದೀನ್ ಜಾರಿಗೆಬೈಲು ಇವರನ್ನು ಆರಿಸಲಾಯಿತು. ‌ಉಳಿದಂತೆ ವಿವಿಧ ವಿಭಾಗಗಳನ್ನೊಳಗೊಂಡ 45 ಮಂದಿಯ ಸಮಿತಿ‌ ರಚಿಸಲಾಯಿತು.

LEAVE A REPLY

Please enter your comment!
Please enter your name here