ವೇಣೂರು 5ಮೆಗಾ ವಾಲ್ಟ್ ವಿದ್ಯುತ್ ಫೀಡರನ್ನು 10ಮೆಗಾ ವಾಲ್ಟ್ ವಿದ್ಯುತ್ ಫೀಡರ್ ಪರಿವರ್ತಿಸಲು ಮನವಿ

0

ಬೆಳ್ತಂಗಡಿ: ವೇಣೂರು ಸಬ್ ಸ್ಕ್ರೆಷನ್ 2 ವಿದ್ಯುತ್ ಫೀಡರ್ ಗಳಿದ್ದು ಕಳೆದ ಬಾರಿ 1ವಿದ್ಯುತ್ ಫೀಡರನ್ನು 5ಮೆಗಾವೋಲ್ಟ್ ನಿಂದ 8ಮೆಗಾ ವೋಲ್ಟ್ ಗೆ ಪರಿವರ್ತಿಸಿ ವೇಣೂರು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಮತ್ತು ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ.

ಇದೀಗ ಆಗಾಗ ವಿದ್ಯುತ್ ಕಡಿತವಾಗುವುದರಿಂದ ಈಗ ಬಾಕಿ ಇರುವ ವಿದ್ಯುತ್ ಫೀಡರನ್ನು ಸಹ 5 ಮೆಗಾ ವೋಲ್ಟ್ ನಿಂದ 10 ಮೆಗಾ ವೋಲ್ಟ್ ಪರಿವರ್ತಿಸಿ, ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರದ ಗಮನವನ್ನು ಸೆಳೆಯಬೇಕೆಂದು, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನಗರದ ಅಧ್ಯಕ್ಷ ದಯಾನಂದ ದೇವಾಡಿಗ ಇವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದರು.

ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯರಾಮ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ನಗರದ ಅಧ್ಯಕ್ಷ ವಂದನಾ ಬಂಡಾರಿ, ತಾಲೂಕು ಆರಾಧನಾ ಸಮಿತಿಯ ಸದಸ್ಯ ಬಾಲಕೃಷ್ಣ ಭಟ್, ಗ್ಯಾರಂಟಿ ಯೋಜನೆಯ ಸದಸ್ಯ ಸತೀಶ್ ಹೆಗ್ಡೆ, ಪಕ್ಷದ ಪ್ರಮುಖರಾದ ರಮೇಶ್ ಪೂಜಾರಿ ಪಡ್ಡಾಯಿ ಮಜಲ್, ಹರೀಶ್ ಪೊಕ್ಕಿ, ಅಶ್ರಫ್ ಕರಿಮಣೇಲು, ತೋಮಸ್ ಅಂಡಿಂಜೆ, ಹಾಗೂ ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here