ಬೆಳ್ತಂಗಡಿ: ಮಹಿಳಾ ವೃಂದ ಬೆಳ್ತಂಗಡಿ, ಇಂಡಿಯನ್ ಡೆಂಟಲ್ ಅಶೋಸಿಯೇಷನ್ ಪುತ್ತೂರು, ರೋಟರಿ ಕ್ಲಬ್ ಬೆಳ್ತಂಗಡಿ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಬೆಳ್ತಂಗಡಿ ಬ್ರಾಂಚ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ. 1ರಂದು ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಹಿಳೆಯರಿಗೆ ಉಚಿತ ಅರೋಗ್ಯ ಮತ್ತು ದಂತ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೃಂದದ ಅಧ್ಯಕ್ಷೆ ನೇತ್ರಾ ಅಶೋಕ್ ವಹಿಸಿದ್ದರು. ಡಾ. ಸುಷ್ಮಾ ಡೋಂಗ್ರೆ ಅರೋಗ್ಯದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಆಶಾ ಪೆದಮಲೆ, ಡಾ. ದೀಪಾಲಿ ಡೋಂಗ್ರೆ, ಡಾ. ವಿನಯ ಕಿಶೋರ್, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ಭಾಗವಹಿಸಿದ್ದರು.
ಆಶಾ ಸತೀಶ್ ಪ್ರಾರ್ಥಿಸಿದರು. ರಶ್ಮಿ ಪಟವರ್ಧನ್ ಸ್ವಾಗತಿಸಿದರು. ಬಳಿಕ ಉಚಿತ ಅರೋಗ್ಯ ಮತ್ತು ದಂತ ತಪಾಸಣಾ ಶಿಬಿರ ನಡೆಯಿತು. ಮಹಿಳಾ ವೃಂದದ ಕಾರ್ಯದರ್ಶಿ ಪ್ರೀತಿ ಆರ್. ವಂದಿಸಿದರು.