ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 42 ವರ್ಷಗಳಿಂದ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2 ವರ್ಷಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಕಾಂತ ಪ್ರಭು ಫೆ. 28ರಂದು ವಯೋ ನಿವೃತ್ತಿ ಹೊಂದಿದರು.ಅವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ನಡೆಯಿತು.
ನಿರ್ದೇಶಕರಾದ ಪ್ರಕಾಶ್ ನಾರಾಯಣ ರಾವ್, ಕಜೆ ವೆಂಕಟೇಶ್ವರ ಭಟ್, ಚೆನ್ನ ಕೇಶವ, ಅಶ್ವಿನಿ ಹೆಬ್ಬಾರ್, ರಾಘವ ಕಲ್ಮಂಜ, ಶಶಿಧರ ಕಲ್ಮಂಜ, ಸುಮಾ ಗೋಖಲೆ, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್, ನಾರಾಯಣ ಫಡಕೆ ಉಪಸ್ಥಿತರಿದ್ದರು.
ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಪ್ರಸನ್ನ ಪರಾಂಜಪೆ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.