ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಧೃಢ ಕಲಶ

0

ಅಳದಂಗಡಿ: ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ‌ಜ. 8ರಿಂದ 12ರವರೆಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಅರುವ ಬ್ರಹ್ಮಕಲಶೋತ್ಸವವೆಂದೇ ಜಿಲ್ಲಾದ್ಯಂತ ಪ್ರಸಿದ್ದಿ ಪಡೆದಿರುವುದಲ್ಲದೆ ಮಾದರಿಯೂ ಆಗಿರುವುದು ಸಂತಸ ತಂದಿದೆ. ಇದಕ್ಕೆಲ್ಲಾ ಅಜಿಲ ಸೀಮೆಯ ಭಕ್ತರು ಕಾರಣ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಅಳದಂಗಡಿ ಅರಮನೆ ಡಾl ಪದ್ಮಪ್ರಸಾದ ಅಜಿಲರು ಶ್ಲಾಘಿಸಿದರು.

ಅವರು ಫೆ. 28ರಂದು ದೇವಿ ಸನ್ನಿಧಿಯಲ್ಲಿ ನಡೆದ ಧೃಡ ಕಲಶ ಸಂದರ್ಭ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಅಲ್ಪ ಸಮಯದ ಅವಧಿಯಲ್ಲಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆದಿರುವುದಕ್ಕೆ ಸ್ಥಳೀಯ ಸಂಘ ಸಂಸ್ಥೆಗಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ, ವಿವಿಧ ತರಕಾರಿ ಇಲಾಖೆಗಳ, ದಾನಿಗಳ ಸಹಕಾರವೇ ಕಾರಣ ಎಂದು ಅವರು ಅಭಿನಂದಿಸಿದರು.

5 ದಿನಗಳ ಬ್ರಹ್ಮಕಲಶೋತ್ಸವದ ಅವಧಿಯಲ್ಲಿ ಸುಮಾರು 60,000ಕ್ಕೂ ಮೇಲ್ಪಟ್ಟು ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿರುವುದು ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕರ ವೇದಿಕೆಯಲ್ಲಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಖರ್ಚು- ವೆಚ್ಚಗಳ ಮಾಹಿತಿಯನ್ನು ವಿಸ್ತಾರವಾಗಿ ನೀಡಿದರು. ಸಂಚಾಲಕ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ವೇದ ಮೂರ್ತಿ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಾಯ ಹಾಗೂ ಅರ್ಚಕ ಪ್ರಕಾಶ ಹೊಳ್ಳ ಅವರು ವಾಸ್ತು ಪೂಜೆ, ಕಲಶಾಭಿಷೇಕ ಇತ್ಯಾದಿ ವಿಧಾನಗಳನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here