ಬೆಳ್ತಂಗಡಿ : ಫೆ.15ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಶಿಕ್ಷಕ ರಕ್ಷಕ ಸಂಘದ ಸಹಯೋಗದೊಂದಿಗೆ ನಡೆಸಲಾದ ಪೋಷಕರ ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾದ, ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಕೆ, ಸಭೆಯನ್ನುzಶಿಸಿ ಮಾತನಾಡುತ್ತಾ, ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣೆಗೆಯಲ್ಲಿ ಪೋಷಕರ ಪಾತ್ರದ ಕುರಿತಾಗಿ ಪೋಷಕರಿಗೆ ಮಾರ್ಮಿಕವಾಗಿ ಅರಿವು ಮೂಡಿಸಿದರು.

ನಿಕಟಪೂರ್ವ ಅಧ್ಯಕ್ಷ ಶೀನಪ್ಪ ಗೌಡ ತಮ್ಮ ಕಾರ್ಯಾವಧಿಯಲ್ಲಿ ಕಾಲೇಜಿನ ಚಟುವಟಿಕೆ ಮತ್ತು ಸಹಕಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಕಾಲೇಜಿನ ಅಭಿವೃದ್ಧಿಯಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೋಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ನೂತನ ಪದಾಧಿಕರಿಗಳ ಆಯ್ಕೆ ಮತ್ತು ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ. ಪದ್ಮನಾಭ ಕೆ ನಡೆಸಿಕೂಟ್ಟರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ವೈಲೆಟ್ ಮೋರಸ್, ಉಪಾಧ್ಯಕ್ಷರಾಗಿ ಉಸ್ಮಾನ್ ಹಾಗೂ ಜೊತೆಕಾರ್ಯದರ್ಶಿಯಾಗಿ ಪ್ರಮೀಳಾ ಆಯ್ಕೆಗೊಂಡರು. ನೂತನ ಅಧ್ಯಕ್ಷರಾದ ವೈಲೆಟ್ ಮೋರಸ್ ಮಾತನಾಡುತ್ತಾ ಸಕ್ರಿಯವಾಗಿ ಕೆಲಸ ನಿರ್ವಹಿಸಲು ಎಲ್ಲಾ ಪೋಷಕ ಮಿತ್ರರ ಸಹಕಾರ ಅಗತ್ಯ ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೋ. ಸುರೇಶ್ ವಿ. ನೂತನ ಪದಾಧಿಕಾರಿಗಳನ್ನು ಆಭಿನಂದಿಸಿ, ಸಂಸ್ಠೆಯ ಬೆಳವಣಿಗೆಯಲ್ಲಿ ಪೋಷಕರೆಲ್ಲರೂ ಸಕ್ರಿಯ ಪಾಲುದಾರರಾಗುವಂತೆ ತಿಳಿಸಿದರು.
ವಿದ್ಯಾರ್ಥಿಗಳ ಪಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಸಂಚಾಲಕ ಸಹ ಪ್ರಾಧ್ಯಾಪಕ ನವೀನ ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯಕ್ರಮವು ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ ರವಿ ಎಂ ಎನ್ ರವರ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು. ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು ಉಪಸ್ಠಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನಿ ಅಂತಿಮ ಬಿ.ಎ ವಿದ್ಯಾರ್ಥಿನಿಯಾದ ಕುಮಾರಿ ಪ್ರತೀಕ್ಷಾ ಮಾಡಿದರು.