ಬೆಳ್ತಂಗಡಿ: ಫೆ. 28ರಂದು ಪುತ್ತೂರಿನಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭವ್ಯ ಮೆರವಣಿಗೆಯೊಂದಿಗೆ ಹೊರೆಕಾಣಿಕೆ ಹೊರಟು ಶ್ರೀ ದೇವರಿಗೆ ಸಮರ್ಪಣೆಯಾಗಲಿದೆ.
ಆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬೆಳ್ತಂಗಡಿ ತಾಲೂಕಿನ ಭಕ್ತಾಭಿಮಾನಿಗಳಿಂದಲೂ ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ.
ಬೆಳ್ತಂಗಡಿ ತಾಲೂಕಿನ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರಗಳಾದ
ಕಣಿಯೂರು, ಕುವೆಟ್ಟು, ನಾರಾವಿ, ಅಳದಂಗಡಿ, ಧರ್ಮಸ್ಥಳ, ಲಾಯಿಲ, ಉಜಿರೆ ಹಾಗೂ ಬೆಳ್ತಂಗಡಿ ನಗರದಿಂದ ಹೊರಕಾಣಿಕೆ ಮೆರವಣಿಗೆ ಹೊರಡಲಿದ್ದು, ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಗೆ 1 ಗಂಟೆಗೆ ತಲುಪಿ ಅಲ್ಲಿಂದ ಹೊರಡಲಿರುವ ಭವ್ಯ ಮೆರವಣಿಗೆಯೊಂದಿಗೆ ತಾಲೂಕಿನ ಭಕ್ತರೂ ಸೇರಿಕೊಂಡು ಶ್ರೀ ಕ್ಷೇತ್ರಕ್ಕೆ ತೆರಳಿ ಅಲ್ಲಿ ದೇವರ ಪ್ರಸಾದವನ್ನು ಸ್ವೀಕರಿಸಿ ತೆರಳುವುದೆಂದು ಎಂದು ಶ್ರೀ ಕ್ಷೇತ್ರ ಗೆಜ್ಜಗಿರಿಯ ಜಾತ್ರಾ ಮಹೋತ್ಸವದ ಪ್ರ. ಸಂಚಾಲಕ ನಿತ್ಯಾನಂದ ನಾವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.