ಬೆಳ್ತಂಗಡಿ: ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾ. 1ರಿಂದ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಬಾರ್ಯ ತೆಕ್ಕಾರು ಪುತ್ತಿಲ ಗ್ರಾಮಗಳ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ಶ್ರೀ ಕೊರಗಜ್ಜ ಕ್ಷೇತ್ರ ಮುಜ್ಜಾಲೆ ಬಾರ್ಯ ಇಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಜಯ ವಿಕ್ರಂ ಕಲ್ಲಾಪುರವರು ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರರವರು ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ತಾಲೂಕಿನ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಶೇಷಪ್ಪ ಸಾಲಿಯನ್ ಬರ್ಯಾ ಗುತ್ತು, ದಿನೇಶ್ ಸುಣ್ಣಾಜೆ, ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕರಾದ ಗುಣಕರ ಅಗ್ನಾಡಿ, ಕೃಷ್ಣಪ್ಪ ಪೈಂದಗುತ್ತು, ವಿಶ್ವನಾಥ್ ಸುನ್ನಾಜೆ, ದಿನಕರ್ ಮುಜ್ಜಾಲೆ, ಚಿದಾನಂದ ಪೋಸ್ಟ್ ಮಾಸ್ಟರ್, ಶ್ರೀಧರ, ಅರುಣ ಬಜಕ್ಕಲ, ಪ್ರವೀಣ್ ಬಜಕ್ಕಲ, ಕಿಶೋರ್ ಚಂದ್ರ, ಕರುಣಾಕರ, ಗುಣಕರ ಮುಗ್ಗ, ಧನುಷ್, ಪ್ರವೀಣ್ ಬಂಗೇರ, ಪುನೀತ್, ಜಿತೇಶ್ ಹರೀಶ್ ಪೇಲತ್ತಾಜೇ, ಪ್ರಿತೇಶ್, ಸ್ನೇಹ ಕಿಶೋರ್, ಶ್ವೇತಾ ದಿನೇಶ್, ವಿಮಲಾ ಸುಣ್ಣಜೆ, ಸಂಧ್ಯಾ ಗುಣಕರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೇಮಾವತಿ, ಸ್ವಾತಿ, ವೇದಾವತಿ ದಿನಕರ್ ಹಾಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಹಲವಾರು ಭಕ್ತಾಭಿಮಾನಿಗಳು ಸೇರಿದ್ದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ಕಣಿಯೂರು ವಲಯ ಸಂಚಾಲಕರು, ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕರು ಆಗಿರುವ ಉಷಾ ಶರತ್ ಕಾರ್ಯಕ್ರಮವನ್ನು ಸಂಘಟಿಸಿ, ಬಂದ ಅತಿಥಿಗಳನ್ನು ಸ್ವಾಗತಿಸಿದರು. ಗುರು ನಾರಾಯಣ ಸೇವಾ ಸಂಘದ ನಿರ್ದೇಶಕ ಗುಣಕರ ಅಗ್ನಾಡಿಯವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.