ವಜ್ರದ ಅಭರಣ ಖರೀದಿ ಮಾಡಿದ ಗ್ರಾಹಕರೊಬ್ಬರಿಗೆ ಮುಳಿಯದಿಂದ ಸಿಕ್ಕಿತು ಸೆಲೆರಿಯೋ ಕಾರು

0

ಬೆಳ್ತಂಗಡಿ: ಮುಳಿಯ ಜುವೆಲ್ಲರಿ ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಆಭರಣ ಮಳಿಗೆಯಾಗಿ ಬೆಳೆದಿದೆ.

ಮುಳಿಯ ಜುವೆಲ್ಲರಿಯ ಬೆಳ್ತಂಗಡಿ ಶಾಖೆಯಲ್ಲಿ ಅಗಸ್ಟ್ 15 , 2024ರಿಂದ ನ.‌30, 2024ರ ಒಳಗಡೆ 20 ಸಾವಿರ ರೂಪಾಯಿಗಿಂತ ಮೇಲ್ಪಟ್ಟು ವಜ್ರ ಖರೀದಿ ಮಾಡಿದವರಿಗೆ ಸೆಲೆರಿಯೋ ಕಾರ್‌ ಗೆಲ್ಲುವ ಲಕ್ಕಿ ಕೂಪನ್‌ ನೀಡಲಾಗಿತ್ತು. ಇದರಲ್ಲಿ ಒಟ್ಟು 235 ರಷ್ಟು ಕೂಪನ್‌ಗಳು ಬಂದಿದ್ದು ಕಾರ್‌ ಡ್ರಾ ಕಾರ್ಯಕ್ರಮವನ್ನು ಫೆ. 24ರಂದು ಸಂಜೆ 4 ಗಂಟೆಗೆ ಮುಳಿಯ ಆಭರಣ ಮಳಿಗೆಯಲ್ಲಿ ಆಯೋಜನೆ ಮಾಡಿದ್ದು, ಇಕೋ ಫ್ರೆಸ್‌ ಎಂಟರ್‌ ಪ್ರೈಸಸ್‌ ಬೆಳ್ತಂಗಡಿ ಹಾಗೂ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್‌ ಹೆಗ್ಡೆ ಉದ್ಘಾಟನೆ ಮಾಡಿದರು.

ಈ ಸಂದರ್ಭಲ್ಲಿ ಮಾತನಾಡಿದ ಅವರು,”ಇವತ್ತು ಒಂದು ವಿಶೇಷ ಕಾರ್ಯಕ್ರಮದಲ್ಲಿ ನಾನು ಇರುವುದು ಬಹಳ ಖುಷಿ ಕೊಟ್ಟಿದೆ, ಹಿಂದೆ ಬೆಳ್ತಂಗಡಿ ಮಂದಿಗೆ ಇಲ್ಲಿ ಒಂದು ಸುಸಜ್ಜಿತ ಆಭರಣ ಮಳಿಗೆ ಇಲ್ಲ, ಆಭರಣ ಖರೀದಿಗೆ ಮಂಗಳೂರು ಕಡೆಗೆ ಹೋಗಬೇಕು ಅನ್ನುವ ಕೊರಗು ಇತ್ತು. ಆದರೆ 6 ವರ್ಷದಿಂದ ಮುಳಿಯ ಜುವೆಲ್ಲರಿ ದೊಡ್ಡ ಶಾಖೆ ಮಾಡುವ ಮೂಲಕ ಬಹಳ ಒಳ್ಳೆಯ ಸೇವೆ ಕೊಡುತ್ತಿದೆ. ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆ ಬಹಳ ಖುಷಿ ಕೊಡುತ್ತದೆ. ಹೆಚ್ಚಿನ ಉದ್ಯಮಿಗಳು ಕೇವಲ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರುತ್ತಾರೆ.

ಆದರೆ ಮುಳಿಯ ಜುವೆಲ್ಲರಿ ಉಳಿದ ಚಟುವಟಿಕೆಗಳಲ್ಲಿಯೂ ಕೊಡುಗೆ ಕೊಡುತ್ತಾ ಬಂದಿದೆ. ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುವ ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ಪ್ರಾಸ್ತಾವಿಕ ಮಾತನ್ನಾಡಿದ ಮುಳಿಯ ಜುವೆಲ್ಲರಿ ಮಾರ್ಕೆಟಿಂಗ್‌ ಕನ್ಸಲ್ಟೆಂಟ್‌ ಆಗಿರುವ ವೇಣು ಗೋಪಾಲ ಶರ್ಮ, ಮುಳಿಯ ಜುವೆಲ್ಲರಿ ಸಮಾಜ ಜೊತೆ ಸೇರಿಕೊಂಡು ಅನೇಕ ಕೆಲಸ ಮಾಡಿಕೊಂಡು ಬರುತ್ತಿದೆ.

ಸಮಾಜ ಸೇವೆ ಅನ್ನುವುದು ಮುಳಿಯ ಫ್ಯಾಮಿಲಿಯ ಡಿಎನ್‌ಎ ನಲ್ಲಿಯೇ ಇದೆ ಎಂದು ಹೇಳಿ ವಜ್ರ ಖರೀದಿ ಮಾಡಿದಾಗ ಸಿಗುವ ಆನಂದ ಹಾಗೂ ವಜ್ರದ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಕ ರಾಕೇಶ್‌ ಹೆಗ್ಡೆ ಕಾರ್‌ ಡ್ರಾ ಕೂಪನ್‌ ನ ಚೀಟಿ ಎತ್ತುವ ಮೂಲಕ ಕಾರು ಗೆದ್ದ ಅದೃಷ್ಟಶಾಲಿಯ ಸಂಖ್ಯೆಯನ್ನು ಘೋಷಿಸಿದರು. ಇನ್‌ ವಾಯ್ಸ್‌ ಸಂಖ್ಯೆ 4265ರ ಕೂಪನ್‌ ಸಂಖ್ಯೆ 00172ರ, ಶಿರ್ಲಾಲಿನ ಪ್ರಿಯಾಂಕ ಸೆಲೆರಿಯೋ ಕಾರು ಗೆದ್ದ ಅದೃಷ್ಟಶಾಲಿಯಾಗಿದ್ದಾರೆ.

ಇವರಿಗೆ ಫೆ. 25ರಂದು ಮುಳಿಯ ಆಭರಣ ಮಳಿಗೆಗೆ ಕರೆದು ಕಾರ್‌ ಕೀ ನೀಡಲಾಗುತ್ತದೆ ಎಂದು ಎಂ ಡಿ ವೇಣು ಗೋಪಾಲ ಶರ್ಮಾ ಹೇಳಿದ್ದಾರೆ.

ಬೆಳ್ತಂಗಡಿ ಮುಳಿಯ ಆಭರಣ ಮಳಿಗೆಯ ಕಾರ್ಯ ನಿರ್ವಾಹಕ ಸಹಾಯಕ ಶಿವಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್‌ ಡ್ರಾ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉದಯ್‌ ಕುಮಾರ್‌ ಲಾಯ್ಲ ನಿರೂಪಣೆ ಮಾಡಿದರು. ಬೆಳ್ತಂಗಡಿ ಮುಳಿಯ ಜುವೆಲ್ಲರಿ ಮಳಿಗೆ ಮ್ಯಾನೇಜರ್‌ ಲೋಹಿತ್‌ ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here