ಮದ್ದಡ್ಕ: ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕೆರೆ ಸರ್ಕಲ್ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ನ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್ ನ 2025 ನೇ ಸಾಲಿನ ವಾರ್ಷಿಕ ಮಹಾಸಭೆಯು ಮದ್ದಡ್ಕದ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸರ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ವಹಿಸಿದ್ದರು. ಸಭೆಯ ವೀಕ್ಷಕರಾಗಿ ಇಬ್ರಾಹಿಂ ಕಕ್ಕಿಂಜೆ, ವಿಷಯ ಮಂಡನೆಯನ್ನು ಗುರುವಾಯನಕೆರೆ ಖತೀಬ್ ಎ.ಕೆ.ರಝಾ ಅಮ್ಜದಿ ನಡೆಸಿಕೊಟ್ಟರು.

ವೇದಿಕೆಯಲ್ಲಿ ಎಸ್.ವೈ.ಎಸ್ ಗುರುವಾಯನಕೆರೆ ಸರ್ಕಲ್ ಅಧ್ಯಕ್ಷರಾದ ಹಾಜಿ ಹಸೈನಾರ್ ಬಿ.ಬಿ.ಎಸ್., ಉಸ್ಮಾನ್ ಸಖಾಫಿ ಲಾಡಿ, ಹಮೀದ್ ಮುಸ್ಲಿಯಾರ್ ಉಳ್ತೂರು, ಮದ್ದಡ್ಕ ಮಸೀದಿ ಅಧ್ಯಕ್ಷರಾದ ಅಶ್ರಫ್ ಚಿಲಿಂಬಿ, ಅಬ್ಬೋನು ಮದ್ದಡ್ಕ,ಉಮ್ಮರ್ ಮಾಸ್ಟರ್ ಮದ್ದಡ್ಕ, ಉಮ್ಮರಬ್ಬ ಮದ್ದಡ್ಕ,ಪರಪ್ಪು ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಜಾರಿಗೆಬೈಲು ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಮುಸ್ಲಿಯಾರ್, ಅಬ್ದುಲ್ ಕರೀಮ್ ಗೇರುಕಟ್ಟೆ ಹಾಗೂ ಗುರುವಾಯನಕೆರೆ ಸರ್ಕಲ್ ವ್ಯಾಪ್ತಿಯ ಪ್ರತೀ ಯೂನಿಟ್ ನ ಅಧ್ಯಕ್ಷ ಪದಾಧಿಕಾರಿಗಳು ಹಾಜರಿದ್ದರು.

ಹಂಝ ಗೋವಿಂದೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗತ ವರ್ಷದ ವರದಿ ವಾಚನೆ ನಡೆಸಿದರು. ಅಬೂಸ್ವಾಲಿಹ್ ಗೇರುಕಟ್ಟೆ ಲೆಕ್ಕಪತ್ರ ಮಂಡಿಸಿದರು.

LEAVE A REPLY

Please enter your comment!
Please enter your name here