ನಿಟ್ಟಡೆ: ಕಲಿಕೆಯಲ್ಲಿ ಹಿಂದುಳಿದಿರುವ ಮಗುವಿಗೆ ಹೆಚ್ಚಿನ ಮಹತ್ವ ನೀಡಿ ಕಲಿಸಿದರೆ ಮಗು ಕಲಿಕೆಯಲ್ಲಿ ಪ್ರಗತಿ ಸಾಧಿಸುತ್ತದೆ ಎಂದು ನಿಟ್ಟಡೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಪ್ರಯೋಗಿಕವಾಗಿ ಮಕ್ಕಳು ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಕಲಿಕೆಯಲ್ಲಿ ಹಿಂದುಳಿದ ಮಗು ಭಾಷಾ ವಿಷಯದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುತ್ತದೆ ಎಂದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮತ್ತು ಸದಸ್ಯರುಗಳು ತಾಯಂದಿರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು, ಬಜಿರೆ ಸಿ. ಆರ್. ಪಿ. ರಾಜೇಶ್, ಪುಂಜಾಲಕಟ್ಟೆ ಸಿ. ಆರ್. ಪಿ ಚೇತನ ಪುತ್ತಿಲ, ಸಿ. ಆರ್. ಪಿ ಶರೀಫ್ ಉಪಸ್ಥಿತರಿದ್ದರು.
1)ನಿಟ್ಟಡೆ ಕ್ಲಸ್ಟರ್ ನ ಪೆರ್ಮುಡ, ಮಂಗಳ ತೇರು, ಹಚ್ಛಾಡಿ, ಕುಕ್ಕೇಡಿ, ಪಡಂಗಡಿ, ಪಂಡಿಂಜೆ ವಾಳ್ಯ, ನಿಟ್ಟಡೆ ಶಾಲೆಯ ಎಫ್. ಎಲ್. ಎನ್ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದರು.
2) ನಿಟ್ಟಡೆ ಕ್ಲಸ್ಟರ್ & ಪಟ್ಟ0 ದಡ್ಕ ಕ್ಲಸ್ಟರ್ ಶಿಕ್ಷಕರು ತೀರ್ಪುಗಾರರಾಗಿ ಸಹಕರಿಸಿದರು.
3) 7 ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಪ್ರಶಸ್ತಿ ಪತ್ರಗಳು ಹಾಗೂ ಬಹುಮಾನ ನೀಡಲಾಯಿತು.
4) ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹದ ಬಹುಮಾನ ನೀಡುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಾಯಿತು.
5) ಕ್ಲಸ್ಟರ್ ನ ಸಹ ಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
6) ಸಿ. ಆರ್. ಪಿ ಆರತಿ ಸಮಾರೋಪ ಸಮಾರಂಭದ ಕಾರ್ಯಕ್ರಮದ ಕೊನೆಗೆ ಧನ್ಯವಾದ ಗೈದರು.
ಶರೀಫ್ ಕಲಿಕಾ ಹಬ್ಬಕ್ಕೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಭ ಹಾರೈಸಿದರು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಆರತಿ ಸ್ವಾಗತಿಸಿದರು.
ಸಹ ಶಿಕ್ಷಕಿ ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು. ಜಿ.ಪಿ.ಟಿ ಶಿಕ್ಷಕಿ ರಜನಿ ಧನ್ಯವಾದ ನೀಡಿದರು.