ಕಲ್ಲೇರಿ: ಸೌಪರ್ಣಿಕ ಬ್ಯೂಟಿ ಪಾರ್ಲರ್ ಮತ್ತು ಫ್ಯಾನ್ಸಿ ಸೆಂಟರ್ ಕಲ್ಲೇರಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಕಟ್ಟಡದ ಒಂದನೇ ಮಹಡಿಯಲ್ಲಿ ಫೆ. 14ರಂದು ಶುಭಾರಂಭಗೊಂಡಿತು. ತಣ್ಣೀರುಪಂತ ಪ್ರಾ. ಕೃ. ಪತ್ತಿನ ಸಹಕಾರ ಸಂಘ ಅಧ್ಯಕ್ಷ ಜಯಾನಂದ ಕಲ್ಲಾಪು ಉದ್ಘಾಟಿಸಿದರು.

ನೂತನ ಬ್ಯೂಟಿ ಪಾರ್ಲರ್ ಮತ್ತು ಫ್ಯಾನ್ಸಿಯಲ್ಲಿ ಬ್ರೈಡಲ್ ಮತ್ತು ಅಡ್ವಾನ್ಸ್ ಮೇಕಪ್, ಹೇರ್ ಸ್ಟ್ರೈಟಿಂಗ್, ಹೇರ್ ಸ್ಮೂತಿಂಗ್, ಹೇರ್ ಸ್ಪಾ, ಹೇರ್ ಕಲರಿಂಗ್, ಬ್ಲೀಚ್, ಮೆಹೆಂದಿ, ವ್ಯಾಕ್ಸ್, ಫೇಷಿಯಲ್, ಐಬ್ರೋ, ಮೆನಿಕ್ಯೂರ್, ಪೆಡಿಕ್ಯೂರ್ ಸೇವೆಗಳು ಹಾಗೂ ಎಲ್ಲಾ ರೀತಿಯ ಫ್ಯಾನ್ಸಿ ಐಟಂಗಳು ಲಭ್ಯವಿದೆ ಎಂದು ಮಾಲಕಿ ನಿಶ್ಮಿತಾ ಯಶೋಧರ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕೆ. ಸುರೇಂದ್ರ ಪ್ರಸಾದ್, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಜಯರಾಜ್, ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಬಿರ್ಮಕೋಡಿಯ ಜಯಲಕ್ಷ್ಮಿ ಮತ್ತು ರುಕ್ಮಯ್ಯ ಗೌಡ, ತಣ್ಣೀರುಪಂತ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಅಣವು ಹಾಗೂ ನಿರ್ದೇಶಕ ಸುರೇಶ್ ಎಚ್. ಎಲ್., ಪ್ರಭಾಕರ ಗೌಡ ಪೊಸಂದೋಡಿ, ಕಣಿಯೂರು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ನಿರಾಡಿ ಹಾಗೂ ಸೇಸಪ್ಪ ಮೂಲ್ಯ ಪಿಲಿಗೂಡು, ಕಲ್ಲೇರಿ ರುಚಿ ಬೇಕರಿಯ ಕುತುಬುದ್ದೀನ್, ಅಂತರದ ಎಲೆಕ್ಟಿçಷಿಯನ್ ಸಂದೀಪ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಮಾವಿನಕಟ್ಟೆ, ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ಹಲೇಜಿ, ಸುರೇಶ್ ಜೆ. ಇ ಮೆಸ್ಕಾಂ, ವಿಘ್ನೇಶ್ ಫ್ಯಾನ್ಸಿಯ ಯಶೋಧರ ಪೂಜಾರಿ, , ವಾಸಪ್ಪ ಪೂಜಾರಿ, ಹರ್ಷಿತ, ತಣ್ಣೀರುಪಂತ ಸಹಕಾರಿ ಸಂಘದ ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.