

ತಣ್ಣೀರುಪಂತ: ಸ. ಉ. ಪ್ರಾ. ಶಾಲೆಯ ನಾಮಫಲಕ ಫೆ. 8ರಂದು ಉದ್ಘಾಟಿಸಲಾಯಿತು. ಅಂತರ ದಿ. ನಾಗಪ್ಪ ಗೌಡರ ಸ್ಮರಣಾರ್ಥವಾಗಿ ಪತ್ನಿ ವಿಶಾಲಾಕ್ಷಿ ಮತ್ತು ಮಕ್ಕಳು ಶಾಲೆಗೆ ಕೊಡುಗೆಯಾಗಿ ನಾಮ ಫಲಕ ನೀಡಿದರು.

ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯೋಗೀಶ್ ಅಳಕ್ಕೆ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ದಾನಿಗಳ ಪಾತ್ರ ಗೌರವಹಿತವಾಗಿದ್ದು ಎಂದು ಹೇಳುತ್ತಾ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಫೆಲ್ಸಿ ಫಾತಿಮಾ ಮೋರಸ್ ಮಾತನಾಡಿ ಶತಮಾನದ ಶಾಲೆಗೆ ಎಲ್ಲ ದಾನಿಗಳು ಕೈಜೋಡಿಸುವಂತೆ ವಿನಂತಿಸಿದರು.
ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಅಬ್ದುಲ್ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕ ಪ್ರೇಮನಾಥ ಸ್ವಾಗತಿಸಿದರು. ಶಿಕ್ಷಕ ಉದಯ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿ ನಳಿನಾಕ್ಷಿ ಮತ್ತು ರೆನಿಶಾ ನಿರೂಪಿಸಿದರು. ಫಿಲೋಮಿನಾ ರೋಡ್ರಿಗಸ್ ವಂದಿಸಿದರು.