

ಬೆಳ್ತಂಗಡಿ: ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ದೇವಸ್ಥಾನದಲ್ಲಿ ಮಾ.3ರಿಂದ 6ರವರೆಗೆ ಪರ್ಯಂತ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಿದ್ಧತೆಯ ಕುರಿತಾಗಿ ಫೆ.11ರಂದು ಸಂಜೆ 5ಕ್ಕೆ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತವು ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಿ. ಹರ್ಷೇಂದ್ರ ಕುಮಾರ್ರವರು ಆಗಮಿಸಿದ್ದು, ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಬ್ರಹ್ಮಕಲಶೋತ್ಸವದ ಕಾರ್ಯಗಳನ್ನೆಲ್ಲಾ ನಿರ್ವಿಘ್ನವಾಗಿ ನೆರವೇರಿಸಿಕೊಡುವಂತೆ ಪ್ರಾರ್ಥಿಸಿಕೊಂಡರು.
ವೇದಮೂರ್ತಿ ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ಚಪ್ಪರ ಮುಹೂರ್ತವು ನಡೆದು ಡಿ. ಹರ್ಷೇಂದ್ರ ಕುಮಾರ್ರವರು ಚಪ್ಪರ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಪ್ರಧಾನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯರು, ನಂದಕುಮಾರ್, ಸೋಮನಾಥ ಶೆಟ್ಟಿ ಪರೀಕ ಅರಮನೆ, ದಿಲೀಪ್ ರಾಜ್ ಹೆಗ್ಡೆ ಆತ್ರಾಡಿ ಬೀಡು, ಇಸ್ಮಾಯಿಲ್ ಆತ್ರಾಡಿ ಹಾಗೂ ಹಲವಾರು ಗಣ್ಯರು ಹಾಗೂ ಗ್ರಾಮಸ್ಥರು, ಸೌಖ್ಯವನದ ವೈದ್ಯಾಧಿಕಾರಿಗಳು, ವ್ಯವಸ್ಥಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.