ಬೆಳಾಲು: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ ವಾರ್ಷಿಕೋತ್ಸವದಂದು ನಡೆದಿದ್ದು, ಅಧಿಕಾರ ಹಸ್ತಾಂತರವು ಫೆ. 2ರಂದು ಬೆಳಾಲಿನಲ್ಲಿ ನಡೆಯಿತು.
ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು, ಕಾರ್ಯದರ್ಶಿಯಾಗಿ ಶೇಖರ ಗೌಡ ಕೊಳ್ಳಿಮಾರು, ಗೌರವಾಧ್ಯಕ್ಷರಾಗಿ ವಿಜಯ ಗೌಡ ಸೌತಗದ್ದೆ ಹಾಗೂ ಉಪಾಧ್ಯಕ್ಷರುಗಳಾಗಿ ಪೆರಣ ಗೌಡ ಪರಾರಿ, ಮಾಧವ ಗೌಡ ಓಣಾಜೆ, ಗಂಗಾಧರ ಗೌಡ ಸುರುಳಿ ಹಾಗೂ ಕೋಶಾಧಿಕಾರಿಯಾಗಿ ಜಯಣ್ಣಗೌಡ ವಿನಂದೇಳು ಆಯ್ಕೆಯಾದರು.
ಯುವ ವೇದಿಕೆಯ ಅಧ್ಯಕ್ಷರಾಗಿ ಸಂಜೀವ ಗೌಡ ಕಾಡoಡ, ಕಾರ್ಯದರ್ಶಿಯಾಗಿ ಸುಕೇಶ್ ಗೌಡ ಅರಿಪಾದೆ, ಗೌರವಾಧ್ಯಕ್ಷರಾಗಿ ಉಮೇಶ್ ಗೌಡ ಜಿ. ಎಂ., ಉಪಾಧ್ಯಕ್ಷರುಗಳಾಗಿ ಲೋಕೇಶ್ ಗೌಡ ಮಂಡಾಲು, ದಿನೇಶ್ ಗೌಡ ಉರಜ್ಜ, ಸತೀಶ್ ಗೌಡ ಗಣಪನಗುತ್ತು, ಕೋಶಾಧಿಕಾರಿಯಾಗಿ ಮಂಜುನಾಥ ಗೌಡ ಹೊಸಒಕ್ಲು ಆಯ್ಕೆಯಾದರು.
ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಲತಾ ಕೇಶವ ಗೌಡ ಸುಕೃತಂ ನಿಲಯ ಬೆಳಾಲು, ಕಾರ್ಯದರ್ಶಿಯಾಗಿ ಜಯಶ್ರೀ ಮೋಹನ್ ಗೌಡ ಕಾಡoಡ, ಗೌರವಧ್ಯಕ್ಷರಾಗಿ ಕನ್ನಿಕಾ ಪದ್ಮ ಗೌಡ ಬೆಳಾಲು ಹಾಗೂ ಉಪಾಧ್ಯಕ್ಷರಾಗಿ ನಿಶಾ ಬಾನಂದೂರು, ಪ್ರೇಮ ಪೊಯ್ಯದಡ್ಡ, ಲೋಕಮ್ಮ ಬಾತ್ಯಾರಡ್ಡ, ಕೋಶಾಧಿಕಾರಿಯಾಗಿ ಲೀಲಾ ವೀರಣ್ಣಗೌಡ ಬೆಳಾಲು ಆಯ್ಕೆಯಾದರು.
ವಾರ್ಷಿಕೋತ್ಸವದ ಲೆಕ್ಕಪತ್ರ ಮಂಡನೆ ಹಾಗೂ 2025 – 26 ನೇ ಸಾಲಿನ ಯೋಜನೆಯನ್ನು ಮಂಡಿಸಲಾಯಿತು. ಮಹಿಳಾ ವೇದಿಕೆ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿ, ಗ್ರಾಮ ಸಮಿತಿಯ ಕಾರ್ಯದರ್ಶಿ ಶೇಖರ ಗೌಡ ಕೊಳ್ಳಿಮಾರು ವಂದಿಸಿದರು.