ನಾವೂರು: ಬಡೆಕ್ಕಾವು ಗುತ್ತು ಕ್ಷೇತ್ರದಲ್ಲಿ ಪುರಾಣ ಪ್ರಸಿದ್ಧಿ ವಾರ್ಷಿಕ ದೊಂದಿ ನೇಮ ಮತ್ತು ನಮ್ಮೂರ ಉತ್ಸವ ದಿನಾಂಕ ಫೆ. 13 ಮತ್ತು 14ರಂದು ನಡೆಯಲಿದೆ. ಫೆ.13ರಂದು ಬೆಳಿಗ್ಗೆ 8.00ಗಂಟೆಗೆ ಗ್ರಾಮ ದೈವ ಕೊಡಮಣಿತ್ತಾಯ ಮತ್ತು ಕಲ್ಕುಡ ದೈವಗಳಿಗೆ 6 ಲೋವೆ ಕಂಬಗಳ ಮತ್ತು ಮಹಮ್ಮಾಯಿ ಅಮ್ಮನ ಕಟ್ಟೆ, ಕೊಡಣಿತ್ತಾಯ ದೈವದ ಕಟ್ಟೆ ಮತ್ತು ಕಲ್ಕುಡ ದೈವದ ಕಟ್ಟೆಗೆ ಒಟ್ಟು 3 ಮುಖ ಮಂಟಪ ಹಾಗೂ 3 ಭಂಡಾರ ಮಂಚಗಳನ್ನು ದೈವಗಳಿಗೆ ಸಮರ್ಪಣೆ ಮಾಡಲಾಗುತ್ತದೆ.
ಬೆಳಿಗ್ಗೆ 8.00 ಗಂಟೆಗೆ ದೈವಗಳ ಪೂಜೆಗೆ ಪೂರಕ ಹೊಸ ಸಾಮಾಗ್ರಿಗಳನ್ನು ನಾವೂರು ಪಲ್ಕೆಯಲ್ಲಿರುವ ಉತ್ಸವದ ಜಾಗಕ್ಕೆ ಮೆರವಣಿಗೆಯ ಮೂಲಕ ತರಲಾಗುವುದು. ಅದೇ ದಿನ ರಾತ್ರಿ 8 ಗಂಟೆಗೆ ನಾವೂರು ಪಲ್ಕೆಯಲ್ಲಿ ಕೊಡಮಣಿತ್ತಾಯ ಕಲ್ಕುಡ ಕಾಳಮ್ಮ ಹಾಗೂ ಕಲ್ಲುರ್ಟಿ ದೈವಗಳಿಗೆ ದೊಂಪದ ಬಲಿ ಉತ್ಸವ ಮತ್ತು ಮಹಮ್ಮಯಿ ಅಮ್ಮನ ಪೂಜೆಯು ನಡೆಯಲಿದೆ.
ಫೆ.14ರಂದು 860 ವರ್ಷಗಳ ಇತಿಹಾಸವಿರುವ ಬಡೆಕ್ಕಾವುಗುತ್ತು ಮನೆಯಲ್ಲಿ ಗ್ರಾಮ ದೈವ ಕೊಡಮಣಿತ್ತಾಯ, ಜುಮಾದಿ, ಪಂಜುರ್ಲಿ, ಅಪ್ಪೆ ಕಲ್ಲುರ್ಟಿ ದೈವಗಳಿಗೆ ದೊಂದಿ ನೇಮೋತ್ಸವ ನಡೆಯಲಿದೆ ಎಂದು ಬಡೆಕ್ಕಾವು ಗುತ್ತು ಮನೆಯವರು ತಿಳಿಸಿದ್ದಾರೆ.