ಬೆಳ್ತಂಗಡಿ: ರಾಷ್ಟ್ರ ಮಟ್ಟದ ಅಬಾಕಸ್ ಚಾಂಪಿಯನ್ ಶಿಪ್ 2024 ಸ್ಪರ್ಧೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಮಾಲತೇಶ್ ಅವರ ಪುತ್ರ ಸಂಜಯ್ ಮಾಲತೇಶ್ ಮಡಿವಾಳ್ ಹಾಗೂ ಪುತ್ರಿ ಸಂಜನಾ ಮಾಲತೇಶ್ ಮಡಿವಾಳ್ ಪ್ರಥಮ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.
ಬೆಳ್ತಂಗಡಿಯ ಸಂತೆಕಟ್ಟೆ ಸುವರ್ಣ ಆರ್ಕೆಡ್ ನಲ್ಲಿರುವ ಮಹೇಶ್ ಪಾಟೀಲ್ ಅವರ ವಿದ್ಯಾರ್ಥಿಗಳಾಗಿರುವ ಇವರು ಮಾಲತೇಶ್ ಹಾಗೂ ದೇವಮ್ಮ ದಂಪತಿಯ ಮಕ್ಕಳು. ಅಬಾಕಸ್ ಅಕಾಡೆಮಿ ನಡೆಸಿಕೊಡುವ ಈ ಕಾರ್ಯಕ್ರಮ ಫೆ. 2ರಂದು ಧರ್ಮಸ್ಥಳದ ಸಾಧನ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.