ಪಟ್ರಮೆ: ರಥಸಪ್ತಮಿಯ ಪ್ರಯುಕ್ತ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು.
ಶಾಲಾ ಯೋಗ ಶಿಕ್ಷಣ ನಿಯೋಜಕಿ ಶುಭಲಕ್ಷ್ಮಿ ಸೂರ್ಯ ನಮಸ್ಕಾರದ ವಿಧಾನಗಳನ್ನು ತಿಳಿಸಿಕೊಟ್ಟರು. ಶಾಲಾ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮತ್ತು ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ರಥಸಪ್ತಮಿಯ ಹಾಗೂ ಸೂರ್ಯನಮಸ್ಕಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಶಿಕ್ಷಕ ವೃಂದ ಸಹಕರಿಸಿದರು.