ಇಂದಬೆಟ್ಟಿನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ

0

ಬೆಳ್ತಂಗಡಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಶಿಬಿರವನ್ನು ಇಂದಬೆಟ್ಟಿನ ಸಂತ ಫ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಸಭಾಂಗಣದಲ್ಲಿ ಜ. 28 ರಂದು ತಾಲೂಕು ಸಮಿತಿಯ ಅಧ್ಯಕ್ಷ ಬಿ. ಪದ್ಮನಾಭ ಸಾಲ್ಯಾನ್ ಉದ್ಘಾಟಿಸಿದರು.

ಇಂದಬೆಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷೆ ಆಶಾಲತಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಸದಸ್ಯ ಕಾರ್ಯದರ್ಶಿ ಭವಾನಿಶಂಕರ್ ಪ್ರಾಸ್ತವಿಕವಾಗಿ ಮಾತನಾಡಿ ಯೋಜನೆಯ ಉದ್ದೇಶ ಹಾಗೂ ಯೋಜನೆಯ ಮಾಹಿತಿಯನ್ನು ವಿವರಿಸಿದರು.

ಇಂದಬೆಟ್ಟು ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ನ ಧರ್ಮಗುರು ಸ್ಟ್ಯಾನಿ ಮೊಂತೇರೋ ಶುಭಾಸಂಶನೆ ನೀಡಿದರು. ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಾಲೂಕು ಗ್ರಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸದಸ್ಯರಾದ ವಂದನಾ ಕುಮಾರಿ, ಕೆ. ನೇಮಿರಾಜ್ ಕಿಲ್ಲೂರು, ಹಕೀಂ ಕೊಕ್ಕಡ, ಸೌಮ್ಯ ಲಾಯಿಲ, ವೀರಪ್ಪ ಮೊಯ್ಲಿ, ವಾಸುದೇವ್ ರಾವ್, ಸತೀಶ್ ಹೆಗ್ಡೆ, ಅಬ್ದುಲ್ ಸಲಾಂ, ಮೆರಿಟಾ ಪಿಂಟೋ, ಉಪಾಧ್ಯಾಯ, ಕೇಶವ ನಾಯ್ಕ, ಶರೀಫ್, ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಜೈನ್, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳ, ನಾವೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದ, ಸಿ.ಡಿ.ಪಿ.ಒ ಪ್ರಿಯಾ ಆಗ್ನೇಸ್, ಮೆಸ್ಕಾಂ ಎ.ಇ.ಇ, ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಅರುಣ್ ಕುಮಾರ್, ಆಹಾರ ಇಲಾಖೆಯ ಶಿರಸ್ತೆದಾರ್ ವಿಶ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂದಬೆಟ್ಟು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ ಸ್ವಾಗತಿಸಿ, ಮಿತ್ತಬಾಗಿಲು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ನಾವೂರು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here