ಫೆ. 3-5: ಸಂಗಮ ಕ್ಷೇತ್ರ ಪಜಿರಡ್ಕ ದೇವಸ್ಥಾನದ ಪ್ರತಿಷ್ಟಾ ದಿನಾಚರಣೆ – ವಾರ್ಷಿಕ ಜಾತ್ರೆ – ರಥೋತ್ಸವ

0

ಕಲ್ಮಂಜ: ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ ಪ್ರತಿಷ್ಟಾ ದಿನಾಚರಣೆ, ವಾರ್ಷಿಕ ಜಾತ್ರೆ, ರಥೋತ್ಸವ ಫೆ. 3 ರಿಂದ 5 ರವರೆಗೆ ಅಲಂಬಾಡಿ ಪದ್ಮನಾಭಾ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ನೂತನ ಪುಷ್ಪರಥದ ಶೋಭಾ ಯಾತ್ರೆ ಫೆ. 3 ರಂದು ಬೆಳಿಗ್ಗೆ ಸತ್ಯನಪಲ್ಕೆ ಮುಂಚಾನ ಶ್ರೀ ಮಹಾದೇವಿ ಕೃಪಾ ಸುಕನ್ಯಾ ಮತ್ತು ಡಿ. ಜಯರಾಮ ರಾವ್ ಮತ್ತು ಮಕ್ಕಳಿಂದ ದೇವರಿಗೆ ಸಮರ್ಪಿಸುವ ನೂತನ ಪುಷ್ಪರಥದ ಭವ್ಯ ಶೋಭಾಯಾತ್ರೆ ಉಜಿರೆ ಜನಾರ್ದನ ದೇವಸ್ಥಾನದ ರಥ ಬೀದಿಯಿಂದ ನಡೆಯಲಿದೆ.

ಬೆಳಿಗ್ಗೆ ಗಣಹೋಮ, ತೋರಣ ಮುಹೂರ್ತ, ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ಶತರುದ್ರಾಭಿಷೇಕ, ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ ವಾಸ್ತು ರಾಕ್ಷಘ್ನ ಹೋಮ,
ಸಂಜೆ ಬಾಲಗೋಕುಲ ಮತ್ತು ಶಾಲಾ ವಿದ್ಯಾರ್ಥಿಗಳಿಂದ, ಊರವರಿಂದ ಸಾಂಸ್ಕೃಕ ಕಾರ್ಯಕ್ರಮ.

ಫೆ. 4 ರಂದು ಬೆಳಿಗ್ಗೆ ಗಣಹೋಮ, ತ್ರಿಕಾಲ ಪೂಜೆ ಆರಂಭ,, ಬಿಂಬ ಶುದ್ಧಿ, ಕಲಶಾಭಿಷೇಕ, ಮದ್ಯಾಹ್ನ ಮಹಾಪೂಜೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ನೂತನ ಪುಷ್ಪ ರಥ ಸಮರ್ಪಣೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ತ್ರಿಕಾಲ ಪೂಜೆ ಮಂಗಳ, ದೇವರ ಬಲಿ ಉತ್ಸವ, ಪಾಲಕಿ ಉತ್ಸವ, ಪುಷ್ಪ ರಥೋತ್ಸವ, ಕಟ್ಟೆ ಪೂಜೆ, ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ ರಾತ್ರಿ ಮಂಗಳೂರು ಚಾಪರ್ಕ ಕಲಾವಿದರಿಂದ ಏರ್ಲಾ ಗ್ಯಾರಂಟಿ ಅತ್ತ್ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ. 5 ರಂದು ಬೆಳಿಗ್ಗೆ ಗಣಹೋಮ, ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಗಂಧ ಪ್ರಸಾದ ವಿತರಣೆ, ಆಶ್ಲೇಷಾ ಬಲಿ, ಮದ್ಯಾಹ್ನ ಕಲಶಾಭಿಷೇಕ ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ ಭಂಡಾರ ಹೊರಡುವುದು, ದೈವಗಳಿಗೆ ನೇಮೋತ್ಸವ, ರಾತ್ರಿ ನಿಡಿಗಲ್ ಶ್ರೀ ಸತ್ಯ ನಾರಾಯಣ ಭಜನಾ ಮಂಡಳಿಯ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳಿಂದ ಮಹಿಷ ಮರ್ದಿನಿ ಯಕ್ಷಗಾನ ನಡೆಯಲಿದೆ. ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ರವಿ ಕುಮಾರ್ ಭಟ್, ಆಡಳಿತಾಧಿಕಾರಿ ನಾಗಶಯನ, ಅರ್ಚಕ ರಾಜೇಶ್ ಹೊಳ್ಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here