ಮಚ್ಚಿನ: ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಗಳು ಪುಣ್ಯ ಫ್ರೆಂಡ್ಸ್ ಮಿತ್ರರು ವಾಟ್ಸಾಪ್ ಗ್ರೂಪ್ ಇವರಿಂದ ಭಾರತೀಯ ಭೂಸೇನೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಗೊಂಡ ವಿಕ್ರಂ ಜೆ. ಎನ್. ವಂಜಾರೆ ಇವರನ್ನು ಹಳೆ ವಿದ್ಯಾರ್ಥಿ ಮಿತ್ರರು ಒಟ್ಟು ಸೇರಿ ಸನ್ಮಾನಿಸಿದರು.
ಹಳೆ ಮಿತ್ರರಾದ ಜಯಂತ್ ಪೂಜಾರಿ, ಮಹೇಶ್, ವಿನ್ಸೆಂಟ್ ಮೊರಸ್, ಮಂಜುನಾಥ ದಾಸ್, ಪ್ರವೀಣ್ ಶೆಟ್ಟಿ, ನವೀನ್, ಜಯಂತ ಕುಲಾಲ್, ಆಶಾ, ಪ್ರತಿಮಾ, ಭಾರತಿ ಪೂಜಾರಿ, ಭವ್ಯ ಶೆಟ್ಟಿ, ಇಂದುಶ್ರೀ ಜಯಂತ್ ಉಪಸ್ಥಿತರಿದ್ದರು.