ಅಳದಂಗಡಿ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಗ್ರಾ. ಪಂ. ಗೆ ಭೇಟಿ ನೀಡಿ, ಸದ್ರಿ ಗ್ರಾ. ಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸ. ಪ್ರೌ. ಶಾಲಾ ಶೌಚಾಲಯ, ಎನ್. ಆರ್. ಎಲ್. ಎಮ್. ಶೆಡ್ ಸಮುದಾಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಶಾಲಾ ಭೇಟಿ ವೇಳೆ ಎಸ್. ಎಸ್. ಎಲ್. ಸಿ ಮಕ್ಕಳೊಂದಿಗೆ ಪರೀಕ್ಷೆಯ ತಯಾರಿ ಕುರಿತು ಸಂವಾದ ನಡೆಸಿದರು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ರಾ. ಪಂ ಭೇಟಿ ಸಂದರ್ಭ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಎನ್., ನರೇಗಾದ ಪ್ರಭಾರ ಸಹಾಯಕ ನಿರ್ದೇಶಕರು(ಗ್ರಾ. ಉ) ಸಫಾನ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ತಾಂತ್ರಿಕ ಸಂಯೋಜಕರು ( ಸಿವಿಲ್) ನಿತಿನ್ ರೈ, ತಾಂತ್ರಿಕ ಸಹಾಯಕರಾದ (ಕೃ/ತೋ/ಅ)ಪ್ರಾರ್ಥನಾ, ಲೀಸಾ ಡೆಸಾ, ತಾಲೂಕು ಐ. ಇ. ಸಿ ಸಂಯೋಜಕರು, ಗ್ರಾ. ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.