ಕೊಯ್ಯೂರು: ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಜ. 25 ರಂದು ಬೆಳಿಗ್ಗೆ 9 ರಿಂದ ಅಪರಾಹ್ನ 4 ರವರೆಗೆ ಕೊಯ್ಯರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಚುನಾವಣೆ ನಡೆಯಲಿದೆ. 12 ನಿರ್ದೇಶಕರ ಸ್ಥಾನಕ್ಕೆ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತ ತಲಾ 12 ಅಭ್ಯರ್ಥಿಗಳು ಸೇರಿ ಒಟ್ಟು 24 ಮಂದಿ ಅಂತಿಮ ಕಣದಲ್ಲಿದ್ದಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಚುನಾವಣೆ ಅಧಿಕಾರಿಯಾಗಿರುತ್ತಾರೆ.
ಸಹಕಾರ ಭಾರತಿ ಅಭ್ಯರ್ಥಿಗಳು (ಸಾಮಾನ್ಯ -6): ಅಶೋಕ್ ಕುಮಾರ್, ದಾಮೋದರ್ ಗೌಡ, ದಿನೇಶ್ ಗೌಡ, ನಾರಾಯಣ ಗೌಡ ಎಂ, ಬೇಬಿ ಗೌಡ, ಶೀನಪ್ಪ ಗೌಡ
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು (ಸಾಮಾನ್ಯ-6): ಉಜ್ವಲ್ ಕುಮಾರ್ ಕೆ.ಆರ್, ಕೃಷ್ಣಪ್ಪ ಪೂಜಾರಿ, ನವೀನ್ ಕುಮಾರ್, ಪರಮೇಶ್ವರ ಗೌಡ, ಯತೀಶ್, ಸಲೀಂ
ಮಹಿಳಾ ಮೀಸಲು ಸ್ನಾನ (2. ಭಾ.ಅಭ್ಯರ್ಥಿಗಳು) :ಕುಸುಮಾವತಿ,ಶೋಭಾ
ಮಹಿಳಾ ಮೀಸಲು (ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು): ಪ್ರಮೀಳ ಕೆ, ವಿಶಾಲಾಕ್ಷಿ
ಹಿಂದುಳಿದ ಎ ಕ್ಷೇತ: ಕೇಶವ ಪೂಚಾರಿ (ಸ.ಭಾ.ಅಭ್ಯರ್ಥಿ), ಡೀಕಯ್ಯ ಪೂಚಾರಿ (ಕಾಂಗ್ರೆಸ್ ಬೆಂಬಲಿತ)
ಹಿಂದುಳಿದ ಬಿ ಕ್ಷೇತ್ರ:ರವೀಂದ್ರನಾಥ್ ಪಿ (ಸ.ಭಾ.), ಲೋಕೇಶ್ ಗೌಡ (ಕಾಂಗ್ರೆಸ್ ಬೆಂಬಲಿತ)
ಪರಿಶಿಷ್ಟ ಜಾತಿ ಕ್ಷೇತ: ಪುರುಷೋತ್ತಮ (ಸ.ಭಾ.ಅಭ್ಯರ್ಥಿ), ನಾರಾಯಣ (ಕಾಂಗ್ರೆಸ್ ಬೆಂಬಲಿತ)
ಪರಿಶಿಷ್ಟ ಪಂಗಡ ಕ್ಷೇತ್ರ: ಸುರೇಶ(ಸ.ಭಾ.), ಸಂಜೀವ ಮಲೆಕುಡಿಯ (ಕಾಂಗ್ರೆಸ್ ಬೆಂಬಲಿತ).ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಜ. 25 ರಂದು ಪಂಚದುರ್ಗಾ ಸಹಕಾರಿ ಸಭಾ ಭವನ ಕೊಯ್ಯೂರಿನಲ್ಲಿ ಚುನಾವಣೆ ನಡೆಯಲಿದೆ.