ಮಡಂತ್ಯಾರು: ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಲೋಕಾರ್ಪಣೆಯ ಮೊದಲ ಸಂಭ್ರಮಾಚರಣೆಯ ಪ್ರಯುಕ್ತ ಶ್ರೀರಾಮೋತ್ಸವ ಕಾರ್ಯಕ್ರಮವು ಜ. 22 ರಂದು ಗಣಪತಿ ಮಂಟಪ, ಮಡಂತ್ಯಾರಿನಲ್ಲಿ ಸಂಜೆ 6.30 ರಿಂದ 7 ರವರೆಗೆ ನಡೆಯಿತು.
ಬಳಿಕ ಗೋಪೂಜೆ, ದೀಪಾಲಂಕಾರ ಸಂಜೆ 7 ರಿಂದ 8 ರವರೆಗೆ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ ಹಾಗೂ ಮಹಿಳಾ ಭಜನಾ ತಂಡ ಪಾರೆಂಕಿ ರವರಿಂದ ಭಜನೆ ಮತ್ತು ದೀಪ ಪ್ರಜ್ವಲನೆಯ ಮೂಲಕ ಹಾಗೂ ಪುಷ್ಪಾರ್ಚನೆಯ ಮೂಲಕ ಉದ್ಘಾಟನೆ ಮಾಡಲಾಯಿತು.
ಸರಸ್ವತಿ ಭಜನಾ ಮಂಡಳಿಯ ಭಜನಕಾರರಿಂದ ಭಜನಾ ಸೇವೆ ನಡೆಯಿತು. ಗೋ ಪೂಜೆ ಮತ್ತು ಹಣತೆ ಹಚ್ಚಿ ವಿಜೃಂಭಣೆಯಿಂದ ಸಂಭ್ರಮಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾರ್ಯಕರ್ತರಾದ ಪುರುಷೋತ್ತಮ ರೈ ಅರ್ಮುಡ ವಹಿಸಿದ್ದರು. ಗಣೇಶ್ ಕಾರ್ಣಿಕ್ ಮಾಜಿ ವಿಧಾನ ಪರಿಷತ್ ಸದಸ್ಯರು, ಶ್ರೀರಾಮ ಮಂದಿರ ಹೋರಾಟದ ವಿಷಯವನ್ನು ಹಾಗೂ, ಹಿಂದೂ ಸಮಾಜದ ಮುಂದಿರುವ ಸವಾಲುಗಳು, ಮುಂದೆ ಎದುರಿಸಬೇಕಾದ ರೀತಿಯನ್ನು ವಿವರಿಸಿದರು. ವಿ. ಹಿಂ. ಪ. ತಾಲೂಕು ಕಾರ್ಯದರ್ಶಿ ಮೋಹನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಮಡಂತ್ಯಾರು ಪಂಚಾಯತ್ ಅಧ್ಯಕ್ಷೆ ರೂಪಾ ಮತ್ತು ಸದಸ್ಯರು ಮತ್ತು ಪರಿವಾರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.