

ಉಜಿರೆ: ಉಜಿರೆ – ಇಂದಬೆಟ್ಟು ರಸ್ತೆ ಸಿಂಗಲ್ ರಸ್ತೆಯಾಗಿದ್ದು, ವಾಹನ ಚಾಲಕರು ಬಹಳ ತೊಂದ್ರೆ ಅನುಭವಿಸುತ್ತಿದ್ದು ಅದನ್ನು ಮನಗಂಡು ರಿಕ್ಷಾ ಚಾಲಕರು ರಸ್ತೆ ಇಕ್ಕೆಲಕ್ಕೆ ಜೆಸಿಬಿ ಮುಖಾಂತರ ಮಣ್ಣು ಹಾಕಿ ದುರಸ್ತಿ ಕಾರ್ಯ ಜ. 18 ರಂದು ನಿರ್ವಹಿಸಿದರು.
ಈ ರಸ್ತೆಯಲ್ಲಿ ಶಾಲಾ ವಾಹನಗಳು, ಕೆ. ಎಸ್. ಆರ್. ಟಿ. ಸಿ ಬಸ್ ದಿನಕ್ಕೆ 4 ಭಾರಿ ಹೋಗುತ್ತಿದ್ದು, ಸಾವಿರಾರು ವಾಹನಗಳು ಈ ರಸ್ತೆ ಬಳಸುತ್ತಿದ್ದಾರೆ. ಈ ರಸ್ತೆ ಪಿ. ಡಬ್ಲ್ಯೂ. ಡಿ ಗೆ ಹಸ್ತಾಂತರಗೊಂಡಿದ್ದರು ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ರಸ್ತೆ ಇಕ್ಕೆಲಗಳು, ಒಂದು ಒಂದು ಅಡಿ ಗುಂಡಿ ಬಿದ್ದಿದ್ದರಿಂದ ದ್ವಿಚಕ್ರ ವಾಹನ, ಆಟೋ ಚಾಲಕರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ.