ಬೆಳ್ತಂಗಡಿ: ಕರ್ನಾಟಕ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ 2024ರ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಚರಿಷ್ಮಾ ಬಿ. ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಬೆಳ್ತಂಗಡಿ ಶಾಖೆಯ ನಿರ್ದೇಶಕಿ ವಿದುಷಿ, ವಿದ್ಯಾ ಮನೋಜ್ ರವರಲ್ಲಿ ನೃತ್ಯಭ್ಯಾಸವನ್ನು ಮಾಡುತ್ತಿದ್ದಾರೆ. ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮತ್ತು ಕೆ. ಎಸ್. ಆರ್. ಟಿ. ಸಿ. ಉದ್ಯೋಗಿ ಬಾಬು ಸಪಲ್ಯ ಮತ್ತು ಜಯಶ್ರೀ ದಂಪತಿಯ ಪುತ್ರಿ.