ಉಜಿರೆ: ವನರಂಗದಲ್ಲಿ ತ್ರಿದಿನ ಸಮೂಹ ನಾಟಕೋತ್ಸವ

0

p>

ಉಜಿರೆ: ಬೆಳ್ತಂಗಡಿ ತಾಲೂಕಿನ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಸಂಘಟನೆ “ಸಮೂಹ ಉಜಿರೆ” ವತಿಯಿಂದ ವನರಂಗ ಬಯಲು ರಂಗಮಂದಿರದಲ್ಲಿ ವಿಭಿನ್ನ ಕಥಾವಸ್ತು, ಶೈಲಿ ಹಾಗೂ ನಿರೂಪಣೆಯನ್ನು ಹೊಂದಿರುವ 3 ದಿನಗಳ ನಾಟಕೋತ್ಸವದ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ಜ. 7 ರಂದು ಸಂಜೆ ಧರ್ಮಸ್ಥಳದ ರಂಗಶಿವ ಕಲಾ ಬಳಗದವರಿಂದ ಹೇಮಾವತಿ ಹೆಗ್ಗಡೆ ಮಾರ್ಗದರ್ಶನದಲ್ಲಿ “ಮುದ್ದಣ್ಣನ ಮನೋರಮೆ ” ಕವಿಯ ಸಂಸಾರ-ರಾಮಾಯಣದ ಸಾರವನ್ನು ಕ್ಷೇತ್ರದ ಸಿಬ್ಬಂದಿಗಳು ಮನೋಜ್ಞವಾಗಿ ಅಭಿನಯಿಸಿದ್ದರು. ಹೇಮಾವತಿ ಹೆಗ್ಗಡೆಯವರ ಕಥಾ ರಚನೆ, ಪರಿಕಲ್ಪನೆ ಹಾಗೂ ಮಾರ್ಗದರ್ಶನ, ಸುನೀಲ್ ಕೊಪ್ಪ ರಂಗರೂಪ, ವಿನ್ಯಾಸ ಹಾಗು ನಿರ್ದೇಶನದಲ್ಲಿ ಕವಿ ಮುದ್ದಣ್ಣನ “ರಾಮಾಶ್ವಮೇಧ “ಹಾಗೂ ರಾಷ್ಟ್ರಕವಿ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಮತ್ತು “ಭವಭೂತಿಯ ಉತ್ತರರಾಮ ಚರಿತೆ”ಯ ಭಾಗಗಳನ್ನಾಯ್ದು ನಾಟಕ ರೂಪಿಸಲಾಗಿದೆ.

ಜ. 8 ರಂದು ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ನಾಡೋಜ ಹಂಪನಾ ರಚಿಸಿ, ದಾಮೋದರ ಶೆಟ್ಟಿ ರಂಗರೂಪಕ್ಕೆ ತಂದು, ಜೀವನ್ ರಾಂ ಸುಳ್ಯ ವಿನ್ಯಾಸ ಹಾಗೂ ನಿರ್ದೇಶನದಲ್ಲಿ “ಚಾರು ವಸಂತ ” ಪ್ರದರ್ಶನ ಕಂಡಿತು.

ಜ. 9 ರಂದು ಎಸ್. ಡಿ. ಎಂ ರಂಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಸ್ಕಂದ ಭಾರ್ಗವ ರಚಿಸಿ, ಯಶವಂತ ಬೆಳ್ತಂಗಡಿ ವಿನ್ಯಾಸ ಮತ್ತು ನಿರ್ದೇಶನದಲ್ಲಿ “ಭೀಷ್ಮಾಸ್ತಮಾನ ” ನಾಟಕ ಕಲಾ ರಸಿಕರನ್ನು ರಂಜಿಸಿತು. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸುರೇಂದ್ರಕುಮಾರ್, ಡಾ!ಮೋಹನ ಆಳ್ವ, ಸೋನಿಯಾ ವರ್ಮಾ, ಪೂರನ್ ವರ್ಮ, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳು ಭಾಗವಹಿಸಿ ಕಲಾಸ್ವಾದಗೈದರು. ಸಮೂಹ ಅಧ್ಯಕ್ಷ ಬಿ. ಎ. ಕುಮಾರ ಹೆಗ್ಡೆ ಮತ್ತು ಮಹೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿ, ವಂದಿಸಿದರು.

LEAVE A REPLY

Please enter your comment!
Please enter your name here