p>
ಗುರುವಾಯನಕೆರೆ: ಅರಮಲೆ ಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮ ಕುಂಭಾಭಿಷೇಕವು ಫೆ. 9 ರಿಂದ 13ನೇ ರ ವರೆಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಮಕರ ಸಂಕ್ರಾಂತಿ ದಿನದಂದು ಕುಂಭ ಕಂಠಿಣಿ ದೇವಿಗೆ ಹಾಗೂ ಮುಂದೆ ಕಾಮಗಾರಿ ನಡೆಯಲಿರುವ ತೀರ್ಥ ಬಾವಿಗೆ ವಿಶೇಷ ಪೂಜೆ ಸಲ್ಲಿಸಿ, ಆನಂತರದಲ್ಲಿ ಬ್ರಹ್ಮ ಕುಂಭಾಭಿಷೇಕದ ಕಾರ್ಯಾಧ್ಯಕ್ಷ ಹಾಗೂ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಅರಮಲೆ ಬೆಟ್ಟ ಅನುವಂಶಿಕ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಬ್ರಹ್ಮ ಕುಂಭಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಾಡ್ಯಾರು ಪುರಂದರ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಶಿಕ್ಷಕ ಧರಣೇಂದ್ರ ಉಪಸ್ಥಿತರಿದ್ದರು.