p>
ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಡಿ. 24 ರಂದು ರಾತ್ರಿ ಕ್ರಿಸ್ ಮಸ್ ಹಬ್ಬದ ಆಚರಣೆ ನಡೆಯಿತು. ಸೇಕ್ರೆಡ್ ಹಾರ್ಟ್ ಚರ್ಚ್ ಸಹಾಯಕ ಧರ್ಮಗುರು ವಂ. ಫಾ. ಒಸ್ಮಡ್ ಡಿಸೋಜಾ ಅರ್ಪಿಸಿದರು. ಪ್ರವಚನವನ್ನು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಉಪಾದ್ಯಾಯ ವಂ. ಫಾ. ದೀಪಕ್ ಡೇಸಾ ಸಂದೇಶ ನೀಡಿದರು.
ಚರ್ಚ್ ಪ್ರಧಾನ ಧರ್ಮಗುರು ವಂ. ಫಾ. ಸ್ಟ್ಯಾನಿ ಗೋವಿಯಸ್ ಹಾಗೂ ಇತರ ಧರ್ಮ ಗುರುಗಳು, ಧರ್ಮ ಭಗಿನಿಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.