p>
ಉಜಿರೆ: ಶ್ರೀ ಧ. ಮಂ ಆಂಗ್ಲ ಮಾಧ್ಯಮ (ಸಿ. ಬಿ. ಎಸ್. ಇ) ಶಾಲಾ ವಾರ್ಷಿಕೋತ್ಸವ ಸಾಂಪ್ರದಾಯಿಕತೆಯಿಂದ ಆಧುನಿಕತೆಯೆಡೆಗೆ ಎಂಬ ವಿಷಯವನ್ನೊಳಗೊಂಡ ‘ಪರಿವರ್ತನ್’ ಎಂಬ ಶೀರ್ಷಿಕೆಯಡಿಯಲ್ಲಿ ಡಿ. 21 ರಂದು ನಡೆಯಿತು.
ಉಜಿರೆ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ “ವಿಷನ್ 2024” ಮಕ್ಕಳ ಕೈ ಬರಹದ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಮನೋಹನ್ ನಾಯಕ್ ಕೆ. ಜಿ. ವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶಾಂತಿ ಜಾರ್ಜ್ ನಿರೂಪಿಸಿದರು.