ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ. 21 ರಂದು ಮೆಟ್ರಿಕ್ ಮೇಳ ನಡೆಯಿತು.
ಶಾಲಾ ಸಂಚಾಲಕ ವಾಮಣ್ ತಾಮರ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲೆಯ ಹಳೆ ವಿದ್ಯಾರ್ಥಿಯಾದ ಅವಿನಾಶ್ ಭಿಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್. ಡಿ. ಎಂ. ಸಿ. ಅಧ್ಯಕ್ಷ ಉಪೇಂದ್ರ, ಶಾಲಾ ಮುಖ್ಯೋಪಾಧ್ಯಾಯ ಸೀತಾರಾಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನು ಆಡಿದರು.
ಶಿಕ್ಷಕಿಯರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ಬಸಳೆ, ಅಲಸಂದೆ, ಹೀರೇಕಾಯಿ, ಕುಂಬಳಕಾಯಿ, ಬದನೆಕಾಯಿ, ಕ್ಯಾರೆಟ್, ಟೊಮೆಟೊ, ಈರುಳ್ಳಿ, ಮರ ಗೆಣಸು, ಸಿಹಿ ಮತ್ತು ಉಪ್ಪಿನ ಗೆಣಸು, ವೀಳ್ಯದೆಲೆ, ಹರಿವೆ ಸೊಪ್ಪು, ಶುಂಟಿ, ಕಲ್ಲಂಗಡಿ, ನುಗ್ಗೆಕಾಯಿ ಸೊಪ್ಪು, ಕಿತ್ತಳೆ ಹಣ್ಣು, ಕಬ್ಬು, ಸಿಯಾಳ, ಬಾಳೆಕಾಯಿ ಹೀಗೆ ವಿವಿಧ ಬಗೆಯ ತರಕಾರಿಗಳನ್ನು, ಕರಿದ ಮಿಕ್ಸರ್ ತಿಂಡಿ, ಪಾನಿಪೂರಿ, ಗೋಬಿಮಂಚೂರಿ, ಚುರುಮುರಿ, ಗೋಳಿಬಜೆ ಹೀಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು, ರಾಗಿ, ಎಳ್ಳು, ಬೊಂಡ, ಸೋಡ, ಪುನರ್ ಪುಳಿ, ಲಿಂಬೆ ಜ್ಯೂಸ್ ಗಳು ಹೀಗೆ ವಿವಿಧ ಬಗೆಯ ಹಣ್ಣಿನ ರಸಗಳು ಮೆಟ್ರಿಕ್ ಮೇಳದಲ್ಲಿ ಭರ್ಜರಿಯಾಗಿ ವ್ಯಾಪಾರ ಮಾಡಿದರು.
ಊರವರು, ಪೋಷಕರು ಈ ಮೇಳದಲ್ಲಿ ಸಂತೋಷದಲ್ಲಿ ಪಾಲ್ಗೊಂಡರು.