ಮಡಂತ್ಯಾರಿನಲ್ಲಿ ಅಮಿತ್ ಶಾ ವಿರುದ್ಧ ಎಸ್‌. ಡಿ. ಪಿ. ಐ ಪ್ರತಿಭಟನೆ

0

p>

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಕಣಿಯೂರು ಬ್ಲಾಕ್ ಸಮಿತಿ ವತಿಯಿಂದ ಅಂಬೇಡ್ಕರ್ ಕುರಿತಾದ ಹೇಳಿಕೆ ಖಂಡಿಸಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಮಡಂತ್ಯಾರು ಜಂಕ್ಷನ್ ಡಿ. 20 ರಂದು ಪ್ರತಿಭಟನೆ ನಡೆಯಿತು.

ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ನಾಯಕ ನವಾಝ್ ಕಟ್ಟೆ, ಅಮಿತ್ ಶಾ ರವರಿಗೆ ಗೃಹ ಸಚಿವರಾಗುವ ಅರ್ಹತೆ ಇಲ್ಲ.‌ ಇಂತಹ ವ್ಯಕ್ತಿಗೆ ಗೃಹ ಸಚಿವ ಸ್ಥಾನದಂತಹ ಉನ್ನತ ಹುದ್ದೆ ನೀಡಲಾಗಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಇರುವ ಭಾವನೆ ಅಮಿತ್ ಶಾ ಮೂಲಕ ಹೊರಬಿದ್ದಿದೆ. ಅಮಿತ್ ಶಾ ರವರನ್ನು ಗೃಹ ಸಚಿವ ಹುದ್ದೆಯಿಂದ ಕೆಳಗೆ ಇಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕರಾರು ‘ಜೈ ಭೀಮ್’ ‘ಅಮಿತ್ ಶಾ ಮಾಫಿ ಮಾವು’ ಮತ್ತು ‘ಇಸ್ತಿಫಾ ದೋ’ ಎಂಬ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಎಸ್‌. ಡಿ. ಪಿ. ಐ ಕಣಿಯೂರು ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಾಫ ಬಂಗೇರಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಕ್ಷೇತ್ರ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಮುಖಂಡರಾದ ಹನೀಫ್ ಪುಂಜಾಲಕಟ್ಟೆ, ನಝೀರ್ ಬಜಾರು, ಹನೀಫ್ ಟಿ. ಎಸ್., ರೌಫ್ ಪುಂಜಾಲಕಟ್ಟೆ, ಅಶ್ರಫ್ ಬದ್ಯಾರು, ಬ್ಲಾಕ್ ಪದಾಧಿಕಾರಿಗಳು, ಬ್ರಾಂಚ್ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here