p>
ಕನ್ಯಾಡಿ: ಮಧುಮೇಹದಿಂದಾಗಿ ಕಾಲು ಕಳೆದುಕೊಂಡ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕೇಶವ. ಎಮ್ ಅವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂಪಾಯಿ 17500 ನ್ನು ಯಕ್ಷಭಾರತಿ ಅಧ್ಯಕ್ಷರಾದ ರಾಘವೇಂದ್ರ ಬೈಪಾಡಿತ್ತಾಯ, ಟ್ರಸ್ಟಿ ಕುಸುಮಾಕರ ಕುತ್ತೋಡಿ, ಸಂಚಾಲಕ ಮಹೇಶ ಕನ್ಯಾಡಿ ಅವರ ನಿವಾಸದಲ್ಲಿ ನೀಡಿ ಶೀಘ್ರ ಚೇತರಿಕೆಗಾಗಿ ಹಾರೈಸಿದರು.
ಯಕ್ಷ ಭಾರತಿ ಪದಾಧಿಕಾರಿಗಳಾದ ಮುರಳೀಧರ ದಾಸ್, ಹರಿದಾಸ ಗಾಂಭೀರ ಧರ್ಮಸ್ಥಳ, ರತ್ನವರ್ಮ ಜೈನ್, ಭವ್ಯ ಹೊಳ್ಳ, ಶಿತಿಕಂಠ ಭಟ್, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ದಿವಾಕರ ಆಚಾರ್ಯ ಗೇರುಕಟ್ಟೆ, ವಿದ್ಯಾ ಕುಮಾರ್ ಕಾಂಚೋಡು, ಗಣೇಶ ಕೆ.ವಿ, ಯಶೋಧರ ಇಂದ್ರ, ರಾಜೇಂದ್ರ ಭಟ್, ಸಂತೋಷ್ ಪೈ ಸಹಕಾರ ನೀಡಿದ್ದರು.
p>