ಬೆಳ್ತಂಗಡಿ: ರೋಟರಿ ಕ್ಲಬ್ ಅರಳಿ ಕಾಶಿಬೆಟ್ಟು ರೋಟರಿ ಸೌಧಕ್ಕೆ ಡಿ. 19 ರಂದು ರೋಟರಿ 3181 ಜಿಲ್ಲಾ ಗವಯನರ್ ರ್ರೋ. ವಿಕ್ರಮ ದತ್ತ ಅಧಿಕೃತ ಭೇಟಿ ನೀಡಿ ರೋಟರಿ ಕಾರ್ಯ ಚಟುವಟಿಕೆ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು. ಜನವರಿಯಲ್ಲಿ ಮಂಗಳೂರಿನಲ್ಲಿ ರೋಟರಿ ಸಮಾವೇಶ ನಡೆಯಲಿದೆ ಎಂದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರನ್ ವರ್ಮ ಮಾತನಾಡಿ ಜಿಲ್ಲಾ ಗವರ್ನರ್ ಭೇಟಿಯ ಸಂದರ್ಭದಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಬೆಳ್ತಂಗಡಿ ಸರಕಾರಿ ಶಾಲೆಗೆ 600 ಕುರ್ಚಿ ವಿತರಣೆ, ಕರ್ನೋಡಿ, ನಾವೂರು, ಮುಂಡಾಜೆ, ಕಲ್ಮ0ಜ ಶಾಲೆಗಳಿಗೆ ಭೇಟಿ ನೀಡಿ ಸೇವಾ ಕಾರ್ಯವನ್ನು ನೋಡಲಾಗುವುದು. ಸಂಜೆ ಕಾಶಿಬೆಟ್ಟು ರೋಟರಿ ಸೌಧದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಹಾಯಕ ಗವಯನರ್ ರೋ. ಮೊಹಮದ್ ವೊಳವೂರು, ವಲಯ ಸೇನಾನಿ ರೋ. ಮನೋರಮ ಭಟ್, ಬೆಳ್ತಂಗಡಿ ರೋಟರಿ ಕ್ಲ ಬ್ ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ಕುಮಾರ್ ರಾವ್, ಮುಂದಿನ ವರ್ಷದ ನಿಯೋಜಿತ ಅಧ್ಯಕ್ಷ ಪ್ರಕಾಶ್ ಪ್ರಭು, ನಿಯೋಜಿತ ಕಾರ್ಯದರ್ಶಿ ಡಾ. ದಯಾಕರ್ ಎಂ. ಎಂ.,ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ನಿಂದ ಬೆಳ್ತಂಗಡಿ ರೋಟರಿ ಟ್ರಸ್ಟ್ ಗೆ ಕುರ್ಚಿಗಳನ್ನು ಜಿಲ್ಲಾ ಗವರ್ನರ್ ಹಸ್ತಾಂತರ ಮಾಡಿದರು. ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.