p>
ಬೆಳ್ತಂಗಡಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ. ವಿಗೊಳಪಟ್ಟ ಬಿ. ಫಾರ್ಮ್ ಅಕ್ಟೋಬರ್- ನವೆಂಬರ್ 2024 ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಸನ್ನ ಫಾರ್ಮಸಿ ಕಾಲೇಜಿನ ಪ್ರಥಮ ವರ್ಷದ ಶರಣ್ಯ ಎಸ್. (87.6%) ಪ್ರಥಮ ಸ್ಥಾನ ಮತ್ತು ಪ್ರಿಯಾ (86.2%) ದ್ವಿತೀಯ ಸ್ಥಾನವನ್ನು, ದ್ವಿತೀಯ ವರ್ಷದ ಅಮೃತ (84.3%) ಪ್ರಥಮ ಸ್ಥಾನ ಮತ್ತು ಧನ್ಯಶ್ರೀ ಎನ್. (82%) ದ್ವಿತೀಯ ಸ್ಥಾನವನ್ನು ಹಾಗು ತೃತೀಯಾ ವರ್ಷದ ಶಿವಯೋಗಿ (85.3%) ಪ್ರಥಮ ಸ್ಥಾನ ಮತ್ತು ಫಾತಿಮಾ ತಫೀಮಾ (83%) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕಾಲೇಜಿನ ಒಟ್ಟು 41 ವಿದ್ಯಾರ್ಥಿಗಳು ಶೇಕಡಾ 75 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಅತ್ಯುನ್ನತ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ಅಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಬೋಧಕ ವರ್ಗದವರು ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.
p>