ಪ್ರಸನ್ನ ಕಾಲೇಜ್ ಕ್ಯಾಂಪಸ್‌ನಲ್ಲಿ ಹೋಟೆಲ್ ಸಮಡೈನ್ ಶುಭಾರಂಭ – ಮಾಜಿ ಸಚಿವ ಗಂಗಾಧರ ಗೌಡರಿಂದ ಉದ್ಘಾಟನೆ

0

p>

ಬೆಳ್ತಂಗಡಿ: ಪ್ರಖ್ಯಾತಿಯನ್ನು ಗಳಿಸಿರುವ ಸಂತೆಕಟ್ಟೆಯ ಐ. ಜೆ. ಕಾಂಪ್ಲೆಕ್ಸ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ವ್ಯವಹಾರ ನಡೆಸಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿರುವ ಹೋಟೇಲ್ ಸಮಡೈನ್ ಇದರ ನೂತನ ಸಹ ಸಂಸ್ಥೆ ಲಾಯಿಲದ ಪ್ರಸನ್ನ ಕಾಲೇಜು ಕ್ಯಾಂಪಸ್‌ನಲ್ಲಿ ಡಿ. 16 ರಂದು ಶುಭಾರಂಭಗೊಂಡಿತು.

ನೂತನ ಸಮಡೈನ್ ಸಹ ಸಂಸ್ಥೆಯನ್ನು ಮಾಜಿ ಸಚಿವರು ಹಾಗೂ ಪ್ರಸನ್ನ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಕೆ. ಗಂಗಾಧರ ಗೌಡ ಅವರು ಉದ್ಘಾಟಿಸಿ, ಬೆಳ್ತಂಗಡಿಯಲ್ಲಿ ಜನಪ್ರಿಯತೆನ್ನು ಪಡೆದಿರುವ ಸಮಡೈನ್ ಹೋಟೇಲ್‌ನ ಸಹ ಸಂಸ್ಥೆಯು ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನ ಮಾಲಕ ಮೋಹನ್ ಕುಮಾರ್, ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಮಾಜಿ ಸದಸ್ಯ ಮೆಹಬೂಬ್‌, ಮಹಮ್ಮದ್ ಹುಸೈನ್ ಉದಯನಗರ, ಪ್ರಸನ್ನ ಕಾಲೇಜಿನ ಸಿಬ್ಬಂದಿಗಳು, ಹೋಟೆಲ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೂತನ ಹೋಟೇಲ್‌ನಲ್ಲಿ ವಿವಿಧ ರೀತಿಯ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಸೀಪುಡ್, ಚೈನೀಸ್ ಚಾರ್ಟ್ಸ್, ಜ್ಯೂಸ್ ಮತ್ತು ಐಸ್‌ಕ್ರೀಂಗಳು ಗ್ರಾಹಕರ ಸೇವೆಗೆ ಲಭ್ಯವಿದೆ ಎಂದು ಮಾಲಕ ಅಬೂಬಕ್ಕರ್ ಅವರು ತಿಳಿಸಿದ್ದಾರೆ.

ಹೋಟೇಲ್‌ನ ಮಾಲಕ ಅಬೂಬಕ್ಕರ್ ಆಗಮಿಸಿದ ಅತಿಥಿ-ಗಣ್ಯರನ್ನು ಸ್ವಾಗತಿಸಿ, ಕೃತಜ್ಞತೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here