p>
ಬೆಳಾಲು: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಬೆಳಾಲು ಗ್ರಾಮ ಇದರ ವತಿಯಿಂದ ಅಪಘಾತದಲ್ಲಿ ತೀವ್ರ ಗಾಯಗೊಂಡ ಸುರುಳಿ ವಿಭಾಗದ ಒತ್ತು ಗೌಡ ಭಾಸ್ಕರ್ ಗೌಡ ಅಲುಂಗೂರು ಇವರಿಗೆ 10,000 ರೂ. ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಬೆಳಾಲು ಗ್ರಾಮದ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಗೌಡ ಸೌತೆಗದ್ದೆ, ಕಾರ್ಯದರ್ಶಿ ಧರ್ಮೇಂದ್ರ ಗೌಡ ಫುಚ್ಚೆಹಿತ್ತಿಲು, ಸದಸ್ಯ ಕರಿಯಣ್ಣಗೌಡ ಬೇರಿಕೆ, ಯುವ ವೇದಿಕೆಯ ಕಾರ್ಯದರ್ಶಿ ಸಂಜೀವ ಗೌಡ ಕಾಡಂಡ, ಸದಸ್ಯ ಬೆಳಿಯಪ್ಪ ಗೌಡ ಕೆರೆಕೋಡಿ, ಗಂಗಾಧರ ಗೌಡ ಸುರಳಿ, ಮಹಿಳಾ ವೇದಿಕೆಯ ಕಾರ್ಯದರ್ಶಿ ಲತಾ ಕೇಶವ ಗೌಡ, ಸದಸ್ಯ ಶೀಲಾವತಿ ಧರ್ಮೇಂದ್ರ ಗೌಡ, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ಲೀಲಾ ವೀರಣ್ಣ ಗೌಡ ಉಪಸ್ಥಿತರಿದ್ದರು.