ಕಲ್ಲೇರಿಯಲ್ಲಿ ವೆಲ್ ನೆಸ್ ಸೆಂಟರ್ ಶುಭಾರಂಭ

0

ತಣ್ಣೀರುಪಂತ: ಕಲ್ಲೇರಿ ಪೇಟೆಯಲ್ಲಿ ಕಲ್ಲೇರಿ ವೆಲ್ ನೆಸ್ ಸೆಂಟರ್ ಡಿ.12ರಂದು ತಣ್ಣೀರುಪಂತ ಪ್ಯಾಕ್ಸ್ ಕಟ್ಟಡದಲ್ಲಿ ಶುಭಾರಂಭ ಗೊಂಡಿತು. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ವೆಲ್ ನೆಸ್ ಕೇಂದ್ರ ಉದ್ಘಾಟಿಸಿದರು.

ಮಾಜಿ ಶಾಸಕ ಪ್ರಭಾಕರ ಬಂಗೇರ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ತಣ್ಣೀರುಪಂತ ಗ್ರಾ‌‌.ಪಂ ಅಧ್ಯಕ್ಷೆ ಹೇಮಾವತಿ ಎಂ., ಹಿರಿಯರಾದ ಧರ್ಮಪ್ಪ ಗೌಡ ಹಾಗೂ ದಾಸಪ್ಪ ಗೌಡ, ವೈದ್ಯರಾದ ಸಂತೋಷ್, ವೈದ್ಯೆ ಬುಸ್ರಿಫಾ, ಉದ್ಯಮಿ ಪ್ರಶಾಂತ್ ಕುಮಾರ್ ಬಾರ್ಯ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಉದ್ಯೋಗಿ ಸೂರಪ್ಪ ಪೂಜಾರಿ, ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಗೇರುಕಟ್ಟೆ, ಶ್ರೀ ಕ್ಷೇತ್ರ ಗೆಜ್ಜೆ ಗಿರಿ ಆಡಳಿತ ಮಂಡಳಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಜಯವಿಕ್ರಮ್ ಕಲ್ಲಾಪು, ಬಾರ್ಯ ಗ್ರಾ.ಪಂ.ಸದಸ್ಯೆ ಉಷಾ ಶರತ್, ಪ್ರಮುಖರಾದ ರಮೇಶ್ ಬಂಗೇರ, ಚೆನ್ನಪ್ಪ ಸಾಲಿಯಾನ್ , ವಿಶ್ವನಾಥ್ ಬಿತ್ತ, ಯೂಸುಫ್, ಮಹ್ಮಮದ್ ಫಾರುಕ್ ಪೆರ್ನೆ, ಬ್ಯಾಂಕ್ ಉಪಾಧ್ಯಕ್ಷ ತಾಜುದ್ದೀನ್, ರವಿ ಪೂಜಾರಿ ಚಿಲಿಂಬಿ ನಿವೃತ್ತ ವೃತ್ತ ನಿರೀಕ್ಷಕ ಸುದರ್ಶನ್, ನಿವೃತ್ತ ಅಧ್ಯಾಪಕ ಕೂಸಪ್ಪ , ಪ್ರಗತಿ ಪರ ಕೃಷಿಕ ಕಿಶೋರ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here