p>
ಬೆಳ್ತಂಗಡಿ: ಇಳಂತಿಲ ಗ್ರಾಮದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿಯ ಪ್ರಯುಕ್ತ, ಕುವೆಟ್ಟು ತುಳು ಶಿವಳ್ಳಿ ಸಭಾ ವಲಯದಿಂದ ಮಧೂರು ಮೋಹನ ಕಲ್ಲೂರಾಯರ ನೇತೃತ್ವದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀಶ ಮುಚ್ಚಿನ್ನಾಯ, ಅನಂತ ಭಟ್ ಕೊಯ್ಯುರು, ಸೂರ್ಯನಾರಾಯಣ ಪುತ್ತೂರಾಯ, ಅಮ್ಮಣ್ಣಾಯ ಪಾಲ್ಗೊಂಡಿದ್ದರು.