p>
ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಜಮೀಯ್ಯತ್ ಉಲ್ ಮುಅಲ್ಲಿಮೀನ್ ಆಶ್ರಯದಲ್ಲಿ ದಕ್ಷಿಣ ಕನ್ನಡದ ಮಂಜನಾಡಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಸಂಗಮದಲ್ಲಿ ಗ್ರೌಂಡ್ ಝೋನ್ ವಿಭಾಗದ ಕಿರಾಅತ್ ಹಾಗೂ ಮಲಯಾಳಂ ಹಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನಾಗಿ ಕುಪ್ಪೆಟ್ಟಿ ರೆಂಜ್ ವ್ಯಾಪ್ತಿಯ ಬದ್ರುಲ್ ಹುದಾ ಮದ್ರಸ ಅಂಡೆಕೇರಿ ವಿದ್ಯಾರ್ಥಿ ಮುಹಮ್ಮದ್ ಶಾಝ್ ಉತ್ತಮ ಸಾಧನೆ ಮಾಡಿದ್ದಾನೆ.
ಶರೀಫ್, ಝೈತೂನ್ ದಂಪತಿಗಳ ಪುತ್ರನಾದ ಮಹಮ್ಮದ್ ಶಾಝ್ ರ ಈ ಸಾಧನೆಗೆ ಅಧ್ಯಾಪಕ ಶಫೀಖ್ ಅಹ್ಸನಿ ಕಾಮಿಲ್ ಸಖಾಫಿ, ಸ್ವಾದಿಖ್ ಸಅದಿ ಹಾಗೂ ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.