ಉಜಿರೆ: ಡಿ. 6 ರಂದು ಇಲ್ಲಿನ ಸಮೀಪದ ಕಲ್ಲಾಜೆ, ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಶ್ರೀ. ಧ. ಮಂ ಕಾಲೇಜು (ಸ್ವಾಯತ್ತ) ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ವ್ಯಂಗ್ಯ ಚಿತ್ರ ಹಾಗೂ ಭಾಷಾ ಆಟಗಳು ಎಂಬ ಎರಡು ವಿಷಯಗಳ ಕುರಿತು ಜ್ಞಾನ ವಿಸ್ತಾರ ಕಾರ್ಯಕ್ರಮ ನಡೆಯಿತು.
ಚಿತ್ರಕಲೆ ಮತ್ತು ವ್ಯಂಗ್ಯ ಚಿತ್ರ ಎಂಬ ವಿಷಯದ ಕುರಿತು ಶ್ರೀ. ಧ. ಮಂ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ವಿದ್ಯಾರ್ಥಿಗಳೊಡನೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳಿಗೆ ಚಿತ್ರದ ಮೂಲಕ ವಿಷಯಗಳ ಕುರಿತು ಅರಿವು ಮೂಡಿಸಿದರು.
ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಸೂರ್ಯ ನಾರಾಯಣ ಭಟ್ ವಿದ್ಯಾರ್ಥಿಗಳ ಜೊತೆ ಭಾಷಾ ಆಟಗಳು ಎಂಬ ವಿಷಯದ ಕುರಿತು ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಇದಕ್ಕೆ ಸಂಬಂಧ ಪಟ್ಟ ಹಾಗೆ ಆಟಗಳನ್ನು ಆಡಿಸುವ ಮೂಲಕ ಮಕ್ಕಳನ್ನು ಮನೋರಂಜಿಸಿದರು.
ಯೋಜನಾಧಿಕಾರಿಗಳಾದ ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ದೀಪ ಆರ್. ಪಿ ಜೊತೆಗೆ ಶಿಬಿರಾಧಿಕಾರಿಗಳಾದ ಅಮಿತ್ ಕುಮಾರ್, ಶೃತಿ ಮಣಿಕೀಕರ್ ಉಪಸ್ಥಿತರಿದ್ದರು ಹಾಗೂ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಉಪಸ್ಥಿರಿದ್ದರು.