ಗಣಿತವೆಂದರೆ ಕಬ್ಬಿಣದ ಕಡಲೆಯಂತೆ ಕ್ಲಿಷ್ಟವೆನ್ನುವ ವಿದ್ಯಾರ್ಥಿಗಳಿಗೆ ಸುಲಭ, ಸರಳ, ಖುಷಿಯೊಂದಿಗೂ ಕ್ರಿಯಾಶೀಲವಾಗಿ ಗಣಿತ ಕಲಿಕಾ ಪರಿಸರ ನಿರ್ಮಾಣ ಮಾಡಬಹುದು.
ಗಣಿತ ವಿಷಯ ಸರಳತೆಗೊಂಡರೆ ವಿದ್ಯಾರ್ಥಿ ಕಲಿಕೆಯಲ್ಲಿ ಹರ್ಷದಿಂದ ಪಾಲ್ಗೊಳ್ಳುವ. ‘ಒರಿಗಾಮಿ’ ಪದ್ಧತಿ ಮೂಲಕ ಗಣಿತದ ಕೆಲವೊಂದು ಪಾಠಗಳನ್ನು ಮಾದರಿಗಳ ಮೂಲಕ ಅರ್ಥೈಸಿಕೊಂಡು ಮುಂದುವರಿಯಲು ಸಾಧ್ಯವೆಂದು ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನ ಗಣಿತ ವಿಭಾಗ ಮುಖ್ಯಸ್ಥ ಅಡೆಲೈಡೆ ಸಲ್ದಾನ್ಹ ಹೇಳಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲಗಳ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ‘ಒರಿಗಾಮಿ’ ಪದ್ಧತಿ ಮೂಲಕ ಗಣಿತದ ಹಲವಾರು ವಿಷಯಗಳನ್ನು ಮಾದರಿಗಳ ರೂಪದಲ್ಲಿ ತಯಾರಿಸುವುದನ್ನು ಕಲಿಸಿಕೊಟ್ಟರು.
ಸಮತಲ ಪೇಪರ್ ನ ಸಹಾಯದಿಂದ 3ಡಿ ಡೈಮೆನ್ಷನಲ್ ಪರಿಕಲ್ಪನೆಯ ತಯಾರಿಯನ್ನು, ಬಣ್ಣ ಬಣ್ಣದ ಪೇಪರ್ ಮೂಲಕ 24 ಸೈಡ್ಸ್ ಪಾಲಿಗಾನ್ ತಯಾರಿ, ಗಣಿತದಲ್ಲಿ ಹವ್ಯಾಯುತವಾಗಿ ಬಳಸುವ, ಬಳಸಲೇ ಬೇಕಾದ ಹಲವಾರು ಪ್ಯಾಟರ್ನ್, ಶೇಪ್ ಗಳ 3ಡಿಗಳ ತಯಾರಿ, ಡೊ ಡೆಕಾ ಹೆಡ್ರಾನ್, ಕ್ರಾಫ್ಟ್ ಮೂಲಕ ಗಣಿತ ಮಾದರಿಗಳು, ಅಂಬ್ರಾಯ್ದರಿ ಕಲೆಯನ್ನು ಗಣಿತದ ಮೂಲಕ ಕಲಿಸುವ ನೈಪುಣ್ಯತೆ, ಒರಿಗಾಮಿ ಶೀಟ್ ಗಳಲ್ಲ್ಲಿ ಪ್ಯಾರಬೋಲಾ ಶೇಪ್ ಮಾದರಿಗಳ ತಯಾರಿ ಇತ್ಯಾದಿ ಇನ್ನೂ ಹಲವಾರು ಕೌಶಲ್ಯಗಳ ತಯಾರಿಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗೆ ಸಹಾಯಕರಾಗಿ ಅಲಿಡಾ ನೋರೊನ್ಹ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥೆ ಧನಲಕ್ಷ್ಮೀ, ಉಪನ್ಯಾಸಕಿ ಪ್ರಿಯ, ಕೃಷ್ಣಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ಸಂಸ್ಥೆಗಳ ಇತರೆ ಕಾಲೇಜು ಹಾಗೂ ಪ್ರೌಢಶಾಲೆ ವಿಭಾಗದ ಆಸಕ್ತ ಗಣಿತ ಅಧ್ಯಾಪಕರುಗಳು ಭಾಗವಹಿಸಿದರು. ಗಣಿತ ವಿಭಾಗದ ಉಪನ್ಯಾಸಕಿ ಪ್ರಿಯ ಸ್ವಾಗತಿಸಿದರು. ಕೃಷ್ಣಪ್ರಸಾದ್ ವಂದಿಸಿ, ನಿರೂಪಿಸಿದರು.