ಬೆಳ್ತಂಗಡಿ: 113 ವರ್ಷಗಳ ಇತಿಹಾಸ ಇರುವ ಮತ್ತು 1185 ಕೋಟಿ ರೂ ವ್ಯವಹಾರ ಮಾಡಿರುವ ಎಂ.ಸಿ.ಸಿ ಬ್ಯಾಂಕಿನ 18ನೇ ಶಾಖೆ ನ.24ರಂದು ಉದ್ಘಾಟನೆಗೊಂಡಿದೆ.
ಶಾಖೆಯ ಉದ್ಘಾಟನೆಯನ್ನು ಎಂ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಶಾಖೆಯನ್ನು ಉದ್ಘಾಟನೆಯನ್ನು ಮಾಡಿದರು. ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ನ ಧರ್ಮಗುರುಗಳಾದ ಅತೀ ವಂ.ವಾಲ್ಟರ್ ಡಿಮೆಲ್ಲೋರವರು ದೀಪ ಪ್ರಜ್ವಲನೆ ಮಾಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೋಕ್ಯುರೇಟರ್ ಅತೀ ವಂ.ಅಬ್ರಹಾಂ ಪಟ್ಟೆರಿಲ್ ಭದ್ರತಾ ಕೋಠಡಿಯನ್ನು ಉದ್ಘಾಟನೆ ಮಾಡಿದರು.
ಸಮಾಜಸೇವೆ ಹಾಗೂ ಸಾಧಕರಿಗೆ ಸನ್ಮಾನ: ಚಾರ್ಮಾಡಿ ಹಸನಬ್ಬ, ಡಾ.ವೇಣುಗೋಪಾಲ ಶರ್ಮಾ, ಕಾಸ್ಮೀರ್ ವಿನೇಜಸ್, ಸಬಿತಾ ಮೊನಿಸ್ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಹಾಯಧನ: ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಎಲ್.ಎಮ್.ಪಿಂಟೋ ಆಸ್ಪತ್ರೆ ಬದ್ಯಾರ್ ಈ ಸಂದರ್ಭದಲ್ಲಿ ಸಹಾಯಧನದ ಚೆಕ್ ಹಸ್ತಾಂತರ ಮಾಡಲಾಯಿತು.
ಬ್ಯಾಂಕಿಗೆ ಕೊಠಡಿಯನ್ನು ಕಲ್ಪಿಸಿಕೊಟ್ಟ ವೈಭವ್ ಆರ್ಕೇಡ್ ಮಾಲಕ ಸೀತಾರಾಮ ಶೆಟ್ಟಿ ಹಾಗೂ ಬ್ಯಾಂಕಿನ ಶಾಖೆಯನ್ನು ವಿನ್ಯಾಸವನ್ನು ಮಾಡಿಕೊಟ್ಟ ಇಂಜಿನಿಯರಿಂಗ್ ಕಾರ್ತಿಕ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಬೆಳ್ತಂಗಡಿ ಸುತ್ತ ಮುತ್ತ ಇರುವ ಚರ್ಚ್ ನ ಅಧ್ಯಕ್ಷರನ್ನು ಮತ್ತು ಕಾರ್ಯದರ್ಶಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಹೆನ್ರಿ ಲೋಬೊ, ಬೆಳ್ತಂಗಡಿ ಸಿರಿಯನ್ ಕೆಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಅನಿಲ್ ಎ.ಜೆ,ಎಂ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೆ.ಡಿಸಿಲ್ವಾ, ಬೆಳ್ತಂಗಡಿ ಶಾಖೆಯ ಸಿಬ್ಬಂದಿಯಾದ ಶರಣ್ ಪಿಂಟೋ, ಸಮಾಜ ಸೇವಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಉಪಸ್ಥಿತರಿದ್ದರು.
ಎಂ.ಸಿ.ಸಿ ಬ್ಯಾಂಕಿನ ಶಾಖೆಗಳು: ಪ್ರಸ್ತುತ ಎಂ.ಸಿ.ಸಿ ಬ್ಯಾಂಕ್ ಸುಸಜ್ಜಿತ ಆಡಳಿತ ಕಛೇರಿ ಮತ್ತು ಸಂಸ್ಥಾಪಕರ ಶಾಖೆ, ಅಶೋಕನಗರ, ಕಂಕನಾಡಿ, ಕುಲಶೇಖರ, ಮೋರ್ಗನ್ಸ್ ಗೇಟ್,
ಮೂಡಬಿದ್ರಿ, ಶಿರ್ವ, ಬಜಪೆ, ಕಿನ್ನಿಗೋಳಿ, ಸುರತ್ಕಲ್, ಉಳ್ಳಾಲ,
ಉಡುಪಿ, ಕುಂದಾಪುರ, ಪುತ್ತೂರು, ಬಿ.ಸಿ.ರೋಡ್, ಕಾರ್ಕಳ ಮತ್ತು ಬ್ರಹ್ಮಾವರ ಸೇರಿದಂತೆ 17 ಶಾಖೆಗಳನ್ನು ಹೊಂದಿರುವ ಎಂ.ಸಿ.ಸಿ. ಬ್ಯಾಂಕ್ ತನ್ನ 18ನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ಆರಂಭಿಸಿದೆ.
ಬ್ಯಾಂಕಿನ ಸಿಬ್ಬಂದಿಗಳು ಪ್ರಾರ್ಥನೆ ಮಾಡಿದರು. ಎಂ.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ವಿನ್ಸೆಂಟ್ ಲಸ್ರಾದೊ ಸ್ವಾಗತಿಸಿದರು.