ಉಜಿರೆ: ಕಾಲೇಜಿನ ‘ಇಕೋ ಕ್ಲಬ್’ ನ ವತಿಯಿಂದ ದ್ವಿತೀಯ ವರ್ಷದ ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳನ್ನು ಉಜಿರೆಯ ಯಶೋವನಕ್ಕೆ ಕರೆದುಕೊಂಡು ಹೋಗಲಾಯಿತು. ಯಶೋವನದಲ್ಲಿದ್ದ ಅಪಾರ ಸಸ್ಯ ಸಂಪತ್ತು, ಅಪರೂಪದ ಗಿಡಮೂಲಿಕೆಗಳ ಸಸ್ಯಗಳು, ವೈದ್ಯಕೀಯಕ್ಕೆ ಬಳಸುವ ನಾಟಿ ಸಸ್ಯ ಸಂಪತ್ತು, ಪಶ್ಚಿಮ ಘಟ್ಟದ ವಿಭಿನ್ನ ಔಷಧೀಯ ಸಸ್ಯಗಳ ವೀಕ್ಷಣೆ ನಡೆಸಿದರು.
‘ಇಕೋ ಕ್ಲಬ್’ ಸಂಚಾಲಕಿ ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರು ಆಗಿರುವ ವಾಣಿ ಎಂ.ಎಂ. ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿಗಳ ಜೊತೆಗೆ ಸಂಸ್ಕೃತ ಉಪನ್ಯಾಸಕರು ಆಗಿರುವ ಮಹೇಶ್ ಎಸ್.ಎಸ್
ಹಾಗೂ ಜೀವಶಾಸ್ತ್ರ ಉಪನ್ಯಾಸಕ ಪ್ರದೀಪ್.ಕೆ ಉಪಸ್ಥಿತರಿದ್ದರು.
p>