ಕಾಶಿಪಟ್ಣ: ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಕಾಶಿಪಟ್ಣ: ನ.19 ರಂದು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅದ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅದ್ಯಕ್ಷರಾದ ತ್ರಿವೇಣಿ ಜೀತೇಶ್ ವಹಿಸಿದ್ದರು. ಅಥಿತಿಗಳಾಗಿ ಸತೀಶ್.ಕೆ ಅದ್ಯಕ್ಷರು ಗ್ರಾಮಪಂಚಾಯತ್ ಕಾಶಿಪಟ್ಣ, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪನಾಯ್ಕ್ ಹಾಗು ಗರಡಿ ಫ್ರೆಂಡ್ಸ್ ನ ಅದ್ಯಕ್ಷ ಜೀತೇಶ್ ಆಗಮಿಸಿದ್ದರು.

ಕಾರ್ಯಕ್ರಮವನ್ನು ಮಕ್ಕಳ ಹೆತ್ತವರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಬಾಲವಿಕಾಸ ಸಮಿತಿಯ ಸದಸ್ಯರು ಹಾಜರಿದ್ದರು. ಪ್ರೇಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರದ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಜರಗಿಸಲಾಯಿತು ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ವಿಜೇತ ಮಕ್ಕಳಿಗೆ ತ್ರಿವೇಣಿ ಜೀತೇಶ್ ರವರ ಸಹಕಾರದಿಂದ ಬಹುಮಾನ ವಿತರಿಸಲಾಯಿತು.

ಕೇಂದ್ರದಲ್ಲಿ ದಾಖಲಾಗಿರುವ 21 ಮಕ್ಕಳಿಗೂ ಜೀತೇಶ್ ಅದ್ಯಕ್ಷರು ಬಹುಮಾನಗಳನ್ನು ನೀಡಿ ಸಹಕರಿಸಿದರು ಹಾಗು ಅವರ ಮಗಳಾದ ಜಿವೀಶಾಳ ಹುಟ್ಟುಹಬ್ಬವನ್ನು ದೀಪ ಬೆಳಗಿಸಿ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿತಿಂಡಿ ವಿತರಿಸಿ ಸಂಭ್ರಮದಿಂದ ಆಚರಿಸಲಾಯಿತು. ಹಾಜರಿದ್ದ ಎಲ್ಲರಿಗೂ ಲಘು ಉಪಹಾರ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಿತಿಯ ಸದಸ್ಯರಾದ ಹಮೀದ್ ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here