ನೆಲ್ಯಾಡಿ: ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ಗೆ ರಾಷ್ಟ್ರೀಯಾಧ್ಯಕ್ಷ ಸೀನಿಯರ್ ಸಿ.ಎಸ್.ಎಲ್., ಪಿ.ಪಿ.ಎಫ್ ಚಿತ್ರಕುಮಾರ್ ನ.19ರಂದು ಅಧಿಕೃತ ಭೇಟಿ ನೀಡಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ವತಿಯಿಂದ ಹೊಸಮಜಲು ಪಕ್ಕದ ಧವಳಗಿರಿ ಕ್ರಾಸ್ ನಲ್ಲಿ ನಿರ್ಮಿಸಿದ ಮಾರ್ಗದರ್ಶಿ ನಾಮಫಲಕ ಉದ್ಘಾಟಿಸಿದರು. ಬಳಿಕ ಸ್ವಚ್ಛಗಂಗಾ ಯೋಜನೆಯಡಿ ನೆಲ್ಯಾಡಿ ಗ್ರಾಮದ ಪಿಲವೂರಿನಲ್ಲಿರುವ ಪುರಾತನ ಶಿವಕೆರೆಯ ಹೂಳು ತೆಗೆದು ಸ್ವಚ್ಛ ಮಾಡಲಾಗಿತ್ತು. ಈ ಪ್ರದೇಶಕ್ಕೆ ರಾಷ್ಟ್ರಾಧ್ಯಕ್ಷರು ಭೇಟಿ ನೀಡಿ ವೀಕ್ಷಿಸಿದರು.
ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ರಾಷ್ಟ್ರೀಯಾಧ್ಯಕ್ಷ ಚಿತ್ರಕುಮಾರ್, ರಾಷ್ಟ್ರೀಯಾ ಉಪಾಧ್ಯಕ್ಷ ಕಿಶೋರ್ ಪೆರ್ನಾಂಡಿಸ್, ರಾಷ್ಟ್ರೀಯಾಧ್ಯಕ್ಷ ಕಾರ್ಯದರ್ಶಿ ಸುಕುಮಾರ್, ರಾಷ್ಟ್ರೀಯ ಅಧಿಕಾರಿ ಡಾ.ಸದಾನಂದ ಕುಂದರ್, ನಿಕಟ ಪೂರ್ವಾಧ್ಯಕ್ಷ ನಾರಾಯಣ ಬಲ್ಯ , ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್, ನೆಲ್ಯಾಡಿ ಚೇಂಬರ್ ಅಧ್ಯಕ್ಷ ಶೀನಪ್ಪ.ಎಸ್., ಕಾರ್ಯದರ್ಶಿ ಮೋಹನ್ ಕುಮಾರ್.ಡಿ, ಕೋಶಾಧಿಕಾರಿ ಪ್ರಕಾಶ್.ಕೆ.ವೈ., ಕಾರ್ಯಕ್ರಮದ ಯೋಜನಾ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಉಪಸ್ಥಿತರಿದ್ದರು. ರಾಷ್ಟ್ರೀಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಿಪಿಎಫ್ ನೀಡಿದ ಚಂದ್ರಶೇಖರ್ ಬಾಣಜಾಲು, ಶೀನಪ್ಪ.ಎಸ್ ಹಾಗೂ ಪ್ರೋಗ್ರೆಸಿಯು ಪಿ.ಪಿ.ಎಫ್ ನೀಡಿದ ಡಾ.ಸದಾನಂದ ಕುಂದರ್ ಗೌರವಿಸಲಾಯಿತು. ನೆಲ್ಯಾಡಿ ಚೇಂಬರ್ ಅಧ್ಯಕ್ಷ ಶೀನಪ್ಪ.ಎಸ್. ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ಕುಮಾರ್.ಡಿ. ವಂದಿಸಿದರು.