ಗುರುವಾಯನಕೆರೆ: ಬಂಟರ ಯಾನೆ ನಾಡವರ ಸಂಘ(ರಿ) ಬೆಳ್ತಂಗಡಿ, ಮಹಿಳಾ ಹಾಗೂ ಯುವ ಬಂಟರ ವಿಭಾಗ ಇವರ ಸಹಬಾಗಿತ್ವದಲ್ಲಿ ಕೆ ಎಸ್ ಹೆಗ್ಡೆ ವೈದ್ಯಕೀಯ ಸಂಸ್ಥೆ ದೇರಳಕಟ್ಟೆ ಇದರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ನವೆಂಬರ್ 24 ರ ಭಾನುವಾರ ಗುರುವಾಯನಕೆರೆಯ ಬಂಟರ ಸಂಘದ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಬಂಟರ ಯಾಣೆ ನಾಡವರ ಸಂಘ(ರಿ) ಬೆಳ್ತಂಗಡಿ ಇದರ ಅಧ್ಯಕ್ಷರಾದ ಜಯಂತ್ ಶೆಟ್ಟೆ ಭಂಡಾರಿಗುಡ್ಡೆ ನೆರವೇರಿಸಲಿದ್ದಾರೆ.
ಅತಿಥಿಗಳಾಗಿ ಡಾ ನವೀನ್ ಪಕ್ಕಳ, ಎಂಡಿ ಅನಸ್ತೇಷಿಯಾ ಸೀನಿಯರ್ ರೆಸಿಡೆಂಟ್ ಕೆ ಎಸ್ ಹೆಗ್ಡೆ, ಡಾ ಪಲ್ಲವಿ ಹೆಚ್ ಸೀನಿಯರ್ ರೆಸಿಡೆಂಟ್ ಡಿಪಾಟರ್್ಮೆಂಟ್ ಆಫ್ ಪ್ಯಾಥೋಲಜಿ, ಕ್ಷೇಮ, ಕೆ ಎಸ್ ಹೆಗ್ಡೆ, ಶ್ರೀಮತಿ ಜಯಲಕ್ಷ್ಮಿ ಸಾಮಾನಿ ಕರಂಬಾರು ಬೀಡು, ಅಧ್ಯಕ್ಷರು, ಬಂಟರ ಮಹಿಳಾ ವಿಭಾಗ, ಪ್ರತೀಕ್ ಶೆಟ್ಟಿ ನೊಚ್ಚ ಅಧ್ಯಕ್ಷರು, ಯುವ ವಿಭಾಗ, ಪುಷ್ಪರಾಜ್ ಶೆಟ್ಟಿ, ಸಂಚಾಲಕರು, ತಾಲೂಕು ಯುವ ವಿಭಾಗ, ಶ್ರೀಮತಿ ಶೋಭಾ ವಿ ಶೆಟ್ಟಿ ಸಂಚಾಲಕಿ ತಾಲೂಕು ಬಂಟರ ಮಹಿಳಾ ವಿಭಾಗ ವೇದಿಕೆ ಅಲಂಕರಿಸಲಿದ್ದಾರೆ.